ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ : ಆರೋಪಿಗೆ ಜಾಮೀನು

Prasthutha|

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಕೊಲೆ ಆರೋಪಿಗಳಲ್ಲಿ ಓರ್ವನಾದ ಜಾಫರ್ ಸಾದಿಕ್ ಎಂಬಾತನಿಗೆ ಎನ್ ಐಎ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.

- Advertisement -

ಹರ್ಷ ಕೊಲೆ ಪ್ರಕರಣ ಸಂಬಂಧ ಫೆಬ್ರವರಿ 24 ರಂದು ಜಾಫರ್ ಸಾದಿಕ್ ನ್ನು ಬಂಧಿಸಿದ್ದ ಪೊಲೀಸರು. 10 ನೇ ಆರೋಪಿಯಾಗಿ ಮಾಡಿದ್ದರು. 6 ನೇ ಆರೋಪಿ ಜಿಲಾನ್ ತಂದೆಯಾದ ಸಾದಿಕ್. ಜಾಮೀನು ಕೋರಿ ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.


ಅರ್ಜಿಯ ವಿಚಾರಣೆ ನಡೆಸಿದ ಎನ್ ಐಎ ವಿಶೇಷ ನ್ಯಾಯಾಲಯ ಆರೋಪಿಯು 50 ಸಾವಿರ ರೂ. ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ನೀಡಬೇಕು. ನ್ಯಾಯಾಲಯ ವಿನಾಯಿತಿ ನೀಡದ ಹೊರತು ಪ್ರತಿಬಾರಿ ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿದೆ.



Join Whatsapp