ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ನೆರವಾಗಿದ್ದ ಶ್ವಾನ ‘ಝೂಮ್’ ಮೃತ್ಯು

Prasthutha|

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ನಲ್ಲಿ  ಭಯೋತ್ಪಾದಕರೊಂದಿಗೆ ನಡೆದ ಎನ್ಕೌಂಟರ್ ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತೀಯ ಸೇನಾ ಶ್ವಾನ ‘ಝೂಮ್’ ಗುರುವಾರ ಮೃತಪಟ್ಟಿದೆ.

- Advertisement -

ಝೂಮ್, ಶ್ರೀನಗರದ ಅಡ್ವಾನ್ಸ್ ಫೀಲ್ಡ್ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

 54 ಎಎಫ್ ವಿಎಚ್ (ಸುಧಾರಿತ ಪಶು ವೈದ್ಯಕೀಯ ಆಸ್ಪತ್ರೆ)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೇನಾ ಶ್ವಾನ ಜೂಮ್ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೃತಪಟ್ಟಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಅನಂತ್ ನಾಗ್ ಜಿಲ್ಲೆಯ ಕೊಕೆರ್ ನಾಗ್ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗುಂಡು ತಗುಲಿ ಶ್ವಾನ ಗಾಯಗೊಂಡಿತ್ತು. ಝೂಮ್ ಗೆ ಎರಡು ಗುಂಡು ತಗುಲಿದ್ದವು. ಗಾಯದ ಬಳಿಕವೂ ತನ್ನ ಕೆಲಸದಲ್ಲಿ ನಿರತವಾಗಿದ್ದ ಶ್ವಾನ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗೆ ನೆರವಾಗಿತ್ತು ಎಂದು ಸೇನೆ ತಿಳಿಸಿದೆ.

Join Whatsapp