ತೀರ್ಥಹಳ್ಳಿ: ಹೊಂಡಕ್ಕೆ ಬೈಕ್ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ತೂದೂರು ಬಳಿ ನಡೆದಿದೆ.
ರವಿನಾಯ್ಕ (37) ಮೃತ ವ್ಯಕ್ತಿ. ಆಯತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ರವಿನಾಯ್ಕ ಅವರ ಮೈ ಮೇಲೆ ಬೈಕ್ ಬಿದ್ದು ಸಾವು ಸಂಭವಿಸಿದೆ.
ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪಿಎಸ್ಐ ನವೀನ್ ಕುಮಾರ್ ಮಠಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.