ಶಿವಮೊಗ್ಗ: ಆಶ್ರಯ ಸಮಿತಿ ವತಿಯಿಂದ ಹಕ್ಕುಪತ್ರ ವಿತರಣೆ

Prasthutha|

ಶಿವಮೊಗ್ಗ : ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಶಾಸಕ  ಈಶ್ವರಪ್ಪ ಅವರು ಇಂದು ಹಕ್ಕುಪತ್ರಗಳನ್ನು ವಿತರಿಸಿದರು. ನಗರದ ವಿದ್ಯಾನಗರದ ಕಲ್ಲರ್ಟಿ, ಜಟ್ ಪಟ್ ನಗರದ 260 ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.

- Advertisement -

ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕ ಈಶ್ವರಪ್ಪ ಅವರು ಜನರಿಗೆ ಸರ್ಕಾರವು ಮನೆ ಕಟ್ಟಿಕೊಂಡು ಜೀವನ ನಡೆಸಲು ಪೂರಕವಾದ ಹಣದ ಸಹಾಯವನ್ನು ನೀಡುತ್ತದೆ. ಆಶ್ರಯ ಯೋಜನೆಯಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 3.50 ಲಕ್ಷ ಹಣವನ್ನು ಉಚಿತವಾಗಿ ನೀಡುತ್ತದೆ. ಒಂದು ಲಕ್ಷ ರೂಪಾಯಿವರೆಗಿನ ಹಣವನ್ನು ಬ್ಯಾಂಕ್ ಸಾಲದ ರೂಪದಲ್ಲಿ ನೀಡುತ್ತದೆ,  ಯೋಜನೆಯನ್ನು ಅರ್ಹರು ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರಾದ ಶಶಿಧರ್ ಸೇರಿದಂತೆ ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Join Whatsapp