ನಗ್ನ ವೀಡಿಯೋ ಮಾಡಿಕೊಂಡು ಯುವತಿಯಿಂದ ಬ್ಲ್ಯಾಕ್ ಮೇಲ್: ಬಿಜೆಪಿ ಮುಖಂಡನಿಂದ ದೂರು

Prasthutha|

ಬೀದರ್: ನಗ್ನ ವಿಡಿಯೋ ತೋರಿಸಿ ಯುವತಿಯೊಬ್ಬಳು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಬೀದರ್ ಬಿಜೆಪಿ ಮುಖಂಡರೊಬ್ಬರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -


ಬಿಎಸ್ ಎನ್ ಎಲ್ ಸಲಹಾ ಸಮಿತಿ ಸದಸ್ಯ ಸಂಗಮೇಶ ನಾಸಿಗಾರ ದೂರು ನೀಡಿರುವ ಬಿಜೆಪಿ ಮುಖಂಡ ಎಂದು ತಿಳಿದು ಬಂದಿದೆ.
ಯುವತಿಯು ಫೇಸ್ ಬುಕ್ ನಲ್ಲಿ ಪರಿಚಯಿಸಿಕೊಂಡು ವಾಟ್ಸಪ್ ನಂಬರ್ ಪಡೆದು ಚಾಟಿಂಗ್ ಮಾಡಿದ್ದಾಳೆ. ಬಳಿಕ ವೀಡಿಯೋ ಕಾಲ್ ಮಾಡಿ, ಒಂದೆರಡು ದಿನ ಆತ್ಮೀಯವಾಗಿ ಮಾತನಾಡಿದ್ದಾಳೆ. ತಿಂಗಳ ಹಿಂದೆ ವೀಡಿಯೋ ಕಾಲ್ ನಲ್ಲಿ ಮಾತಾಡುವಾಗ ನಗ್ನವಾದ ಯುವತಿ, ಆ ನಗ್ನದ ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡು, ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. ಆ ಯುವತಿಯ ಕಿರುಕುಳ ಹೆಚ್ಚಾಗುತ್ತಿದೆ. ಆದ್ದರಿಂದ ಆಕೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂಗಮೇಶ ದೂರಿನಲ್ಲಿ ತಿಳಿಸಿದ್ದಾರೆ.

Join Whatsapp