ಶಿವಮೊಗ್ಗ: ಮಾನವೀಯತೆ ಮೆರದ ಆಟೋ ಚಾಲಕ

Prasthutha|

ಶಿವಮೊಗ್ಗ: ಪ್ರಯಾಣಿಕ ಮಹಿಳೆಯೊಬ್ಬರು ಮರೆತು ಬಿಟ್ಟು ಹೋಗಿದ್ದ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಅನ್ನು ಆಟೋ ಚಾಲಕ ಮರಳಿಸಿದ ಮಾನವೀಯ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

- Advertisement -


ಶಿವಮೊಗ್ಗ ನಗರದಲ್ಲಿ ಆಟೋ ಚಾಲಕನಾಗಿರುವ ಮುಹಮ್ಮದ್ ಗೌಸ್ ಎಂಬವರ ಆಟೋದಲ್ಲಿ ಸೆ.10ರಂದು ಶಹತಾಝ್ ಬಾನು ಎಂಬ ಮಹಿಳೆ ನಗರದ ಅಶೋಕ ಸರ್ಕಲ್ ನಿಂದ ಟಿಪ್ಪುನಗರಕ್ಕೆ ಪ್ರಾಯಾಣಿಸಿದ್ದರು.


ಆಟೋದಿಂದ ಇಳಿಯುವಾಗ ಮಹಿಳೆ ಬ್ಯಾಗ್ ಬಿಟ್ಟು ಹೋಗಿದ್ದರು. ಬ್ಯಾಗ್ ನಲ್ಲಿ ಲಕ್ಷಾಂತರ ಬೆಲೆ ಬಾಳುವ 40 ಗ್ರಾಂ ಚಿನ್ನಾಭರಣವಿತ್ತು. ಸ್ಥಳೀಯ ಪೊಲೀಸರ ಸಹಾಯದಿಂದ ಸಹೃದಯಿ ಮುಹಮ್ಮದ್ ಗೌಸ್ ಬ್ಯಾಗ್ ಅನ್ನು ಮಹಿಳೆಗೆ ಮರಳಿಸಿದ್ದಾರೆ.

- Advertisement -


ಆಟೋ ಚಾಲಕ ಮುಹಮ್ಮದ್ ಗೌಸ್ ಕಾರ್ಯಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದ್ದಾರೆ.

Join Whatsapp