ಇಸ್ಲಾಮಾಬಾದ್: ತನ್ನ ಶಿಫ್ಟ್ ಮುಗಿಯಿತೆಂದು ಪೈಲಟ್ ಅರ್ಧದಲ್ಲಿಯೇ ಪ್ರಯಾಣವನ್ನು ನಿಲ್ಲಿಸಿದ ಘಟನೆ ಪಾಕಿಸ್ಥಾನದಲ್ಲಿ ನಡೆದಿದೆ.
ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಪೈಲಟ್ ತುರ್ತು ಭೂ ಸ್ಪರ್ಶ ಮಾಡಿದ್ದ ಪಿಕೆ-9754 ವಿಮಾನವನ್ನು ತನ್ನ ಶಿಫ್ಟ್ ಮುಗಿಯಿತೆಂದು ಮತ್ತೆ ಹಾರಿಸದೆ ಅರ್ಧದಲ್ಲಿಯೇ ನಿಲ್ಲಿಸಿದ್ದಾನೆ.
ಹವಾಮಾನ ವೈಪರಿತ್ಯದಿಂದಾಗಿ ರಿಯಾದ್‌ನಿಂದ ಹೊರಟು ಇಸ್ಲಮಾಬಾದ್‌ನಲ್ಲಿ ಇಳಿಯಬೇಕಿದ್ದ ವಿಮಾನವು ಸೌದಿ ಅರೇಬಿಯಾದ ದಮಾಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಹವಾಮಾನ ಸರಿಯಾದ ಮೇಲೆ ವಿಮಾನ ಹಾರಾಟಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿದ್ದರೂ ಪೈಲಟ್ ವಿಮಾನವನ್ನು ಹಾರಿಸದೆ ದಿನದ ತನ್ನ ಶಿಫ್ಟ್ ಮುಗಿದಿದೆ ಎಂಬ ಕಾರಣ ನೀಡಿದ್ದಾನೆ.
ಪೈಲಟ್‌ನ ಈ ಕ್ರಮದಿಂದ ಪ್ರಯಾಣಿಕರು ವಿಮಾನದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಆದರೆ ಏನೇ ಮಾಡಿದರೂ ಪೈಲಟ್ ಮುಂದುವರಿಯಲು ಇಷ್ಟಪಡಲಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು.