ಶೆರ್ಲಿನ್ ಚೋಪ್ರಾ ಅಶ್ಲೀಲ ಚಿತ್ರ ಪ್ರಕರಣ: ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ನೋಟಿಸ್

Prasthutha|

- Advertisement -

ನವದೆಹಲಿ: ಅಶ್ಲೀಲ ಚಿತ್ರ ಪ್ರಕರಣ ಸಂಬಂಧವಾಗಿ ನಟಿ ಶೆರ್ಲಿನ್ ಚೋಪ್ರಾರಿಗೆ ಬಂಧನದಿಂದ ರಕ್ಷಣೆ ಒದಗಿಸಿರುವ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಈ ಸಂಬಂಧವಾಗಿ ನೋಟಿಸ್ ನೀಡಿದೆ.

ಚೋಪ್ರಾ ಅವರು ಬಾಂಬೆ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ಅಲ್ಲಿ ಆ ಅರ್ಜಿ ವಜಾ ಆದುದರಿಂದ ಅವರು ಸುಪ್ರೀಂ ಕೋರ್ಟ್ ಮೊರೆ ಹೊಕ್ಕಿದ್ದರು. ಜಸ್ಟಿಸ್ ಗಳಾದ ವಿನೀತ್ ಸರನ್ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠವು ಬಂಧನದಿಂದ ಚೋಪ್ರಾರಿಗೆ ರಕ್ಷಣೆ ಒದಗಿಸಿತು.

- Advertisement -

ಚೋಪ್ರಾ ಪರ ಹಾಜರಾಗಿದ್ದ ವಕೀಲ ಸುನಿಲ್ ಫೆರ್ನಾಂಡಿಸ್ ಅವರು ಬೇರೆಲ್ಲ ಆರೋಪಿಗಳಿಗೆ ರಕ್ಷಣೆ ದೊರೆತಿದೆ ಇಲ್ಲೂ ಬಂಧನದಿಂದ ರಕ್ಷಣೆ ಅಗತ್ಯ ಎಂದು ವಾದಿಸಿದರು.

ಅಶ್ಲೀಲ ಚಿತ್ರ ಪ್ರಕರಣದಲ್ಲಿ ನಟಿ ಪೂನಂ ಪಾಂಡೆ ಜೊತೆ ಶೆರ್ಲಿನ್ ಚೋಪ್ರಾ ಕೂಡ ಆರೋಪ ಹೊತ್ತಿದ್ದರು. ಜನವರಿ 18ರಂದು ಪೂನಂ ಪಾಂಡೆಯವರಿಗೆ ಸುಪ್ರೀಂ ಕೋರ್ಟು ಬಂಧನದಿಂದ ರಕ್ಷಣೆ ಒದಗಿಸಿತ್ತು. ಅವರ ನಿರೀಕ್ಷಣಾ ಜಾಮೀನನ್ನು ಸಹ ಬಾಂಬೆ ಹೈಕೋರ್ಟ್ ನವೆಂಬರ್ 25ರಂದು ಮಾನ್ಯ ಮಾಡಿರಲಿಲ್ಲ.

Join Whatsapp