ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಜಿ ಮುಖರ್ಜಿಗೆ ಸುಪ್ರೀಮ್ ಕೋರ್ಟ್ ಜಾಮೀನು

Prasthutha|

ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಅವರಿಗೆ ಬುಧವಾರ ಸುಪ್ರೀಮ್ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಅವರು 6.5 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು.

- Advertisement -

ಶೀನಾ ಬೋರಾ ಎಂಬಾಕೆಯನ್ನು ಮುಖರ್ಜಿಯ ಮಾಜಿ ಪತಿ ಸಂಜೀವ್ ಖನ್ನಾ, ಹಾಲಿ ಪತಿ ಪೀಟರ್ ಮುಖರ್ಜಿ ಮತ್ತು ಡ್ರೈವರ್ ಶ್ಯಾಮ್ ವರ್ ರೈ ನೆರವಿನೊಂದಿಗೆ ಹತ್ಯೆ ನಡೆಸಲಾಗಿತ್ತು. 2015 ರಲ್ಲಿ ತನ್ನ ಪುತ್ರಿ ಶೀನಾ ಬೋರಾ ಎಂಬಾಕೆಯನ್ನು ಹತ್ಯೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿಗೆ ಸುಪ್ರೀಮ್ ಕೋರ್ಟ್ ಸದ್ಯ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ.ಆರ್ ಗವಾಯಿ ಮತ್ತು ಎ.ಎಸ್ ಬೋಪಣ್ಣ ಅವರನ್ನೊಳಗೊಂಡ ಪೀಠ ಜಾಮೀನು ನೀಡಿದೆ. ಸಾಕ್ಷ್ಯಗಳ ಕೊರತೆಯನ್ನು ಆಧರಿಸಿ ಸುಪ್ರೀಮ್ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

- Advertisement -

2015 ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮುಖರ್ಜಿ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 364, 302, 201 ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಹಿರಿಯ ವಕೀಲ ಮುಕುಲ್ ರೋಹಟಗಿ ಆರೋಪಿ ಮುಖರ್ಜಿ ಪರ ವಾದ ಮಂಡಿಸಿದರೆ, ಹೆಚ್ಚುವರಿ ಸಾಲಿಟರಿ ಜನರಲ್ ಎಸ್ ಬಿ ರಾಜು ಅವರು ಸಿಬಿಐಯನ್ನು ಪ್ರತಿನಿಧಿಸಿದ್ದರು.



Join Whatsapp