ಮದ್ರಸಾಗಳಿಗೆ ಅನುದಾನ ತಡೆದ ಆದಿತ್ಯನಾಥ್

Prasthutha|

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರವು ತನ್ನ ಅನುದಾನ ಪಟ್ಟಿಯಿಂದ ಹೊಸ ಮದ್ರಸಾಗಳನ್ನು ಹೊರಗಿಡುವ ಪ್ರಸ್ತಾಪವನ್ನು ಅಂಗೀಕರಿಸಿದ್ದು ಇನ್ನು ಮುಂದೆ ಮದ್ರಸಾಗಳಿಗೆ ಅನುದಾನ ನೀಡಲ್ಲ ಎಂದು ಘೋಷಿಸಿದೆ.

- Advertisement -

ಅಖಿಲೇಶ್ ಸರ್ಕಾರದ  ನೀಡುತ್ತಿದ್ದ ಅನುದಾನಕ್ಕೆ ಬ್ರೇಕ್ ಹಾಕಿದ ಸರಕಾರ ತನ್ನ ಕೊನೆಯ ಬಜೆಟ್‌ನಲ್ಲಿ ಅನುದಾನದ ಪ್ರಸ್ತಾಪವನ್ನು ಕೈ ಬಿಟ್ಟಿದೆ. ರಾಜ್ಯದ ಮದರಸಾಗಳಲ್ಲಿ  ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಒಂದು ವಾರದ ಒಳಗಾಗಿ ಉತ್ತರ ಪ್ರದೇಶ ಸರ್ಕಾರವು,  ಹೊಸ ಮದರಸಾಗಳಿಗೆ ಧನಸಹಾಯವನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿದ್ದು,  ಈ ಆದೇಶವನ್ನು ಮೇ 12 ರಂದು ಜಾರಿಗೊಳಿಸಿದೆ.

ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ ಸರ್ಕಾರವು 2003 ರವರೆಗೆ ಮಾನ್ಯತೆ ಪಡೆದಿದ್ದ ಸುಮಾರು 100 ಮದ್ರಸಾಗಳಿಗೆ ಅನುದಾನ ನೀಡಿತ್ತು. ಆದರೆ ಯೋಗಿ ಸರಕಾರವು ಮದ್ರಸಾಕ್ಕೆ ಒಂದೇ ಒಂದು ರೂಪಾಯಿ ಅನುದಾನವೂ ಬಿಡುಗಡೆ ಮಾಡಿಲ್ಲ

Join Whatsapp