ಕೊನೆಗೂ ಜೈಲಿನಿಂದ ಅಧಿಕೃತವಾಗಿ ಬಿಡುಗಡೆಯಾದ ಜಯಲಲಿತಾ ಆಪ್ತೆ ಶಶಿಕಲಾ | ಆಸ್ಪತ್ರೆಯಲ್ಲೇ ಸಹಿ ಪಡೆದ ಜೈಲು ಅಧಿಕಾರಿಗಳು

Prasthutha|

ಬೆಂಗಳೂರು : ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲಿನಲ್ಲಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಆಪ್ತೆ ವಿ.ಕೆ. ಶಶಿಕಲಾ ಇಂದು ಬಿಡುಗಡೆಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯಲ್ಲಿರುವ ಶಶಿಕಲಾರನ್ನು ಭೇಟಿಯಾದ ಜೈಲು ಅಧಿಕಾರಿಗಳು, ಅಲ್ಲಿಂದಲೇ ಆಕೆಯ ಬಿಡುಗಡೆಯ ವಿಧಿವಿಧಾನಗಳನ್ನು ಪೂರೈಸಿದರು.

- Advertisement -

ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಶಿಕಲಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಶಿಕಲಾ ಅವರಿದ್ದ ಟ್ರಾಮಾ ಕೇಂದ್ರದ ಒಳಗೆ ವಕೀಲರೊಂದಿಗೆ ತೆರಳಿದ ಜೈಲು ಅಧಿಕಾರಿಗಳು ಅವರ ಸಹಿ ಪಡೆಯುವ ಮೂಲಕ ಅಧಿಕೃತವಾಗಿ ಬಿಡುಗಡೆ ಮಾಡಿದರು.

ಶಶಿಕಲಾ ಅವರನ್ನು ಬಿಡುಗಡೆ ಮಾಡುವ ಸಂದರ್ಭ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್ ಶಿಷ್ಟಾಚಾರಗಳನ್ನು ಪೂರ್ಣಗೊಳಿಸಲಾಗಿದೆ. ಅವರ ಆರೋಗ್ಯ ಈಗ ಸಂಪೂರ್ಣವಾಗಿ ಸುಧಾರಿಸಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ದೃಢಪಡಿಸಿದೆ.

- Advertisement -

Join Whatsapp