ಕೊನೆಗೂ ಶಾರ್ಜೀಲ್ ಇಮಾಮ್ ಗೆ ದೆಹಲಿ ನ್ಯಾಯಾಲಯದಿಂದ ಜಾಮೀನು ಮಂಜೂರು

Prasthutha|

ನವದೆಹಲಿ: 2019 ರಲ್ಲಿ ಜಾಮಿಯಾ ನಗರ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾದ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿರುವ ಜೆಎನ್ ಯು ಮಾಜಿ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಗೆ ದೆಹಲಿ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.

- Advertisement -

ಆದರೂ, ಇಮಾಮ್ ಅವರ ವಿರುದ್ಧ ಬಾಕಿ ಉಳಿದಿರುವ ಇತರ ಪ್ರಕರಣಗಳಲ್ಲಿ ಇನ್ನೂ ಜಾಮೀನು ಸಿಗದ ಕಾರಣ ಅವರು ಕಸ್ಟಡಿಯಲ್ಲಿ ಮುಂದುವರಿಯುತ್ತಾರೆ.

ಎನ್ ಎಫ್ ಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ 242/2019 ರಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನುಜ್ ಅಗರ್ವಾಲ್ ಅವರು ಶಾರ್ಜೀಲ್ ಗೆ ಜಾಮೀನು ಮಂಜೂರು ಮಾಡಿದರು.

- Advertisement -

ಸೆಕ್ಷನ್ 436-ಎ ಅಡಿಯಲ್ಲಿ ಪರಿಹಾರ ಕೋರಿ ಶಾರ್ಜೀಲ್ ಇಮಾಮ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ



Join Whatsapp