ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ : ಆರೋಪಿ ಶಂಕರ್ ಮಿಶ್ರಾಗೆ ಜಾಮೀನು

Prasthutha|

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

- Advertisement -


ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಜ್ಯೋತ್ ಸಿಂಗ್ ಭಲ್ಲಾ ಅವರು 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದ್ದಾರೆ.


ಜನವರಿ 11 ರಂದು ಮಿಶ್ರಾ ಅವರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಾಮೀನು ನಿರಾಕರಿಸಿದ್ದರು. ಘಟನೆ ಅಸಹ್ಯಕರ ಮತ್ತು ವಿಕೃತಿಯಿಂದ ಕೂಡಿದೆ. ನಾಗರಿಕ ಪ್ರಜ್ಞೆಯನ್ನು ಆಘಾತಗೊಳಿಸಿದೆ ಎಂದು ನ್ಯಾಯಾಧೀಶರು ಅರ್ಜಿ ವಿಚಾರಣೆ ವೇಳೆ ಹೇಳಿದ್ದರು.

- Advertisement -


2022ರ ನವೆಂಬರ್ 26 ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಿಶ್ರಾ ಅವರು ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

Join Whatsapp