ಮೊರ್ಬಿ ದುರಂತ: ನ್ಯಾಯಾಲಯಕ್ಕೆ ಶರಣಾದ ಒರೆವಾ ಗ್ರೂಪ್’ನ ಎಂ.ಡಿ.ಜಯಸುಖ್ ಪಟೇಲ್

Prasthutha|

ನವದೆಹಲಿ: ಗುಜರಾತ್’ನ ಮೊರ್ಬಿಯಲ್ಲಿ ಅಕ್ಟೋಬರ್’ನಲ್ಲಿ ಕುಸಿದು 135 ಜನರ ಸಾವಿಗೆ ಕಾರಣವಾದ ಸೇತುವೆಯ ನಿರ್ವಹಣೆ ಮತ್ತು ದುರಸ್ತಿಗಾಗಿ ನೇಮಕಗೊಂಡ ಒರೆವಾ ಗ್ರೂಪ್’ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಇಂದು ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

- Advertisement -


ಈ ಪ್ರಕರಣದಲ್ಲಿ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ ನಂತರ ಕಳೆದ ವಾರ ಅವರ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಘಟನೆಯ ನಂತರ ಪಟೇಲ್ ನಾಪತ್ತೆಯಾಗಿ ಜಾಮೀನಿಗೆ ಮನವಿ ಸಲ್ಲಿಸಿದ್ದರು.


ಅಜಂತಾ ಬ್ರಾಂಡ್ ಅಡಿಯಲ್ಲಿ ಗೋಡೆ ಗಡಿಯಾರಗಳ ತಯಾರಕರಾದ ಒರೆವಾ ಗ್ರೂಪ್’ಗೆ ಮಚ್ಚು ನದಿಗೆ ಅಡ್ಡಲಾಗಿ ಬ್ರಿಟಿಷ್ ಯುಗದ ತೂಗು ಸೇತುವೆಯ ನವೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಗಿತ್ತು. ಕೇಬಲ್’ಗಳು ಮುರಿದ ನಂತರ ತೂಗು ಸೇತುವೆ ಕುಸಿದಿದೆ. ಆ ಸಮಯದಲ್ಲಿ ಸೇತುವೆಯ ಮೇಲೆ ಸುಮಾರು 300 ಜನರು ಇದ್ದರು. ಈ ಪೈಕಿ 135 ಮಂದಿ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp