ಶಕೀರಾ ಕೊಲೆ ಪ್ರಕರಣ: ರಾಷ್ಟ್ರಪತಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ ಪ್ರಧಾನ ಅಪರಾಧಿ ಶ್ರದ್ಧಾನಂದ!

Prasthutha|

ಮಧ್ಯ ಪ್ರದೇಶ, ಆ.3: ಬೆಂಗಳೂರಿನಲ್ಲಿ 1991 ರಲ್ಲಿ ನಡೆದಿದ್ದ ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳು ಶಕೀರಾ ಕೊಲೆ ಪ್ರಕರಣದ ಅಪರಾಧಿ ಶ್ರದ್ಧಾನಂದ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾನೆ.

- Advertisement -

ಪ್ರಕರಣದಲ್ಲಿ ಶ್ರದ್ಧಾನಂದ ಬದುಕಿರುವವರೆಗೂ ಜೈಲಿನಲ್ಲಿಯೇ ಇರುವಂತೆ ಕಳೆದ 2008ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಪ್ರಸ್ತುತ ಶ್ರದ್ಧಾನಂದ ಮಧ್ಯ ಪ್ರದೇಶದ ಸಾಗರ್ ಜಿಲ್ಲಾ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಜೈಲಿನಲ್ಲಿ ಒಳ್ಳೆಯ ನಡತೆ ತೋರಿದ ಕಾರಣಕ್ಕಾಗಿ ಬಿಡುಗಡೆ ಕೋರಿ ಶ್ರದ್ಧಾನಂದ ಅರ್ಜಿ ಸಲ್ಲಿಸಿದ್ದಾನೆ. ಕಳೆದ 27 ವರ್ಷಗಳಿಂದ ಜೈಲಿನಲ್ಲಿರುವ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರುಳಿ ಮನೋಹರ್ ಮಿಶ್ರಾಗೆ ಈಗ 83 ವರ್ಷ ವಯಸ್ಸು.

- Advertisement -

ಸಾಗರ್ ಜಿಲ್ಲಾ ನ್ಯಾಯಾಧೀಶ ದೇವ್ ನಾರಾಯಣ್ ಸಿಂಗ್ ಜೈಲಿಗೆ ಭೇಟಿ ನೀಡಿದಾಗ ರಾಷ್ಟ್ರಪತಿಯಿಂದ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಶ್ರದ್ಧಾನಂದ ನಿರ್ಧರಿಸಿದ್ದಾನೆ‌. ಶ್ರದ್ಧಾನಂದ, ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಮೊಮ್ಮಗಳು ಶಕೀರಾ ಕಲೀಲಿ ವಿವಾಹವಾಗಿದ್ದ.  ಪತ್ನಿ ಶಕೀರಾ ಹೆಸರಿನಲ್ಲಿದ್ದ 600 ಕೋಟಿ ರೂ ಆಸ್ತಿಗಾಗಿ ಆಕೆಯನ್ನು ಶ್ರದ್ಧಾನಂದ ಹತ್ಯೆ ಮಾಡಿದ್ದ.

ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಶಕೀರಾ ಹೆಸರಿನಲ್ಲಿರುವ 600 ಕೋಟಿ ರೂಪಾಯಿ ಆಸ್ತಿಯಿತ್ತು. ಪತ್ನಿ ಶಕೀರಾ ಹತ್ಯೆ ಮಾಡಿ ಮನೆಯ ಹಿಂಭಾಗವೇ ಶವವನ್ನು ಹೂತಿಟ್ಟಿದ್ದ. 2011 ರಲ್ಲಿ ಶ್ರದ್ಧಾನಂದನ ಮನವಿ ಮೇರೆಗೆ ಸ್ವಂತ ರಾಜ್ಯವಾದ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಜೈಲಿಗೆ ಶ್ರದ್ಧಾನಂದ ಸ್ಥಳಾಂತರ ಮಾಡಲಾಗಿದ್ದು ಅಲ್ಲಿಯೇ ಆತ ಶಿಕ್ಷೆ ಅನುಭವಿಸುತ್ತಿದ್ದಾನೆ.

Join Whatsapp