ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ: ವೈ+ ಭದ್ರತೆ ಒದಗಿಸಿದ ಮಹಾರಾಷ್ಟ್ರ ಸರ್ಕಾರ

Prasthutha|

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಜೀವ ಬೆದರಿಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರವು ನಟನಿಗೆ Y+ ಭದ್ರತೆ ಒದಗಿಸಿದೆ.

- Advertisement -

ಇತ್ತೀಚೆಗೆ ಅವರ ಸಿನಿಮಾಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆದ ಬೆನ್ನಲ್ಲೇ ಅಪರಿಚಿತ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಹಿನ್ನೆಲೆ ಬಾದ್ ಶಾಗೆ ಹೆಚ್ಚಿನ ಸೆಕ್ಯೂರಿಟಿ ಸಿಕ್ಕಿದ್ದು, Y+ ಭದ್ರತೆ ಅಡಿ ನಟನೊಂದಿಗೆ ದಿನಪೂರ್ತಿ 24 ಗಂಟೆಗಳ ಕಾಲ ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಮತ್ತು ಐದು ಶಸ್ತ್ರಸಜ್ಜಿತ ಗಾರ್ಡ್ಗಳು ಇರುತ್ತಾರೆ.

ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಈ ವರ್ಷದ ಎರಡು ಸಿನಿಮಾಗಳು ‘ಪಠಾಣ್’ ಮತ್ತು ‘ಜವಾನ್’ ಸೂಪರ್ ಹಿಟ್ ಕಂಡಿದೆ. ಜೊತೆಗೆ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಈ ಬೆನ್ನಲ್ಲೇ ನಟನಿಗೆ ಬೆದರಿಕೆ ಕರೆಗಳು ಬರಲು ಪ್ರಾರಂಭಿಸಿವೆ. ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆಗಳು ಬಂದಿವೆ. ಹೆಚ್ಚಿನ ಅಪಾಯದಲ್ಲಿರುವ ನಟನಿಗೆ Y+ ಭದ್ರತೆ ಸಿಕ್ಕಿದೆ. ಅದರಂತೆ ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್ಒಗಳು) ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಅವರ ನಿವಾಸದಲ್ಲಿ ಐದು ಶಸ್ತ್ರಸಜ್ಜಿತ ಗಾರ್ಡ್ಗಳು ಕಾವಲಿರುತ್ತಾರೆ.

Join Whatsapp