ವಾಮಂಜೂರಿನ ಅಣಬೆ ಕಾರ್ಖಾನೆಯಿಂದ ಹೊರಸೂಸುವ ಮಾಲಿನ್ಯದಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳನ್ನು ಭೇಟಿಯಾದ SDPI ನಿಯೋಗ

Prasthutha|

►ಕ್ರಮ ಕೈಗೊಳ್ಳದಿದ್ದರೆ SDPI ಯಿಂದ ತೀವ್ರ ಹೋರಾಟದ ಎಚ್ಚರಿಕೆ

- Advertisement -

ಮಂಗಳೂರು: ವಾಮಂಜೂರಿನ ಅಣಬೆ ಕಾರ್ಖಾನೆಯಿಂದ ಹೊರಸೂಸುವ ಮಾಲಿನ್ಯ ದಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳನ್ನು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರ ನೇತೃತ್ವದ ನಿಯೋಗ ಭೇಟಿಯಾಗಿದೆ.

ಮಹಾನಗರ ಪಾಲಿಕೆಯ ವಾಮಂಜೂರು ತಿರುವೈಲ್ ವಾರ್ಡಿನ ಆಶ್ರಯ ನಗರದಲ್ಲಿ ಇರುವ ಇನ್ನೂರಕ್ಕೂ ಹೆಚ್ಚು ಮನೆಗಳ ಸಮೀಪ ಮಂಗಳೂರಿನ  ಮಾಜಿ ಶಾಸಕರ ಪಾಲುದಾರಿಕೆಯಲ್ಲಿ ಕಾರ್ಯಾಚರಿಸುತ್ತಿರುವ ಅಣಬೆ ಕಾರ್ಖಾನೆ ಯಿಂದ ಹೊರಸೂಸುವ ಮಾಲಿನ್ಯ ದಿಂದ ಆಗುವ ದುರ್ನಾತದಿಂದ  ಆಶ್ರಯ ನಗರದ  ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಒಳಗಾಗಿದೆ , ಕಳೆದ ಐದಾರು ತಿಂಗಳಿನಿಂದ ಇಲ್ಲಿಯ ನಾಗರಿಕರು ಪಕ್ಷ, ಜಾತಿ ಬೇದ ಮರೆತು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ, ಆದರೆ ಇಲ್ಲಿನ ನಾಗರಿಕರ ಕೂಗು ಮಾತ್ರ ಅರಣ್ಯ ರೋದನವಾಗಿದೆ ,ಜನಪ್ರತಿನಿಧಿಗಳುಅಧಿಕಾರಿಗಳು ಕಂಪನಿ ಮಾಲೀಕರ ಪರವಾಗಿದ್ದಾರೆ , ಮಾಜಿ ಶಾಸಕರ ಒಡೆತನದ ಕಾರ್ಖಾನೆ ಆದ ಕಾರಣಕ್ಕೆ ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಮೌನವಹಿಸುತ್ತಿದ್ದಾರೆ , ಕಳೆದ ನಾಲ್ಕು ತಿಂಗಳ ಹಿಂದೆ ಇಲ್ಲಿನ ಪ್ರತಿಭಟನಾ ಸ್ಥಳಕ್ಕೆ ಬಂದ ಅಂದಿನ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ರವರು ಕಾರ್ಖಾನೆಗೆ ಬೀಗ ಜಡಿಯಲು ಆದೇಶ ನೀಡಿ ದಿಟ್ಟತನ ತೋರಿದರು. ಆದರೆ ಈ ಅದೇಶ ಹೊರಡಿಸಿದ ಎರಡೇ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸರಕಾರ ದಿಡೀರ್ ಎತ್ತಂಗಡಿ ಮಾಡಿದೆ ಅಂದರೆ ಸರಕಾರದ ಮಟ್ಟದಲ್ಲಿ ಬಲಾಢ್ಯರ ಲಾಬಿ,ಮತ್ತು ಪ್ರಭಾವ ನಡೆಯತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ,

- Advertisement -

ನೂರಾರು ಕುಟುಂಬಗಳು ನೆಮ್ಮದಿಯಿಂದ ಜೀವನದ ನಡೆಸುತ್ತಿದ್ದ ಆಶ್ರಯ ನಗರ ಎಂಬ ಜನವಸತಿ ಪ್ರದೇಶಕ್ಕೆ ತಾಗಿಕೊಂಡಿರುವ ಸ್ಥಳದಲ್ಲಿ ಜೈವಿಕ ಕೃಷಿ ನಡೆಸುವ ಹೆಸರಿನಲ್ಲಿ ಕಂಪನಿ ಮಾಲಕರು ಅನುಮತಿ ಪಡೆದುಕೊಂಡು ಸ್ಥಳೀಯ ನಿವಾಸಿಗಳಿಂದ ಯಾವುದೇ ಅಭಿಪ್ರಾಯ ಪಡೆಯದೆ ಕೃಷಿ ನಡೆಸುವ  ಹೆಸರಿನಲ್ಲಿ ತಪ್ಪು ಮಾಹಿತಿ ನೀಡಿ ಅಣಬೆ ಫ್ಯಾಕ್ಟರಿಯನ್ನು ಮಾಡಿರುತ್ತಾರೆ. ಈ ಫ್ಯಾಕ್ಟರಿಯಿಂದ ಹೊರಸೂಸುವ ಮಾಲಿನ್ಯವು ಕೆಟ್ಟ ದುರ್ವಾಸನೆಯಿಂದ ಕೂಡಿದ್ದು ಕೊಳೆತ ಪ್ರಾಣಿಗಳ ಮೃತ ಶರೀರದಿಂದ  ಹೊರಬರುವಂತಹ ವಾಸನೆ ಗಿಂತಲೂ  ಕೆಟ್ಟ ದುರ್ನಾಥ ಬೀರುತ್ತಿದೆ .ಇದರಿಂದ ಸಂಕಷ್ಟಕ್ಕೀಡಾದ ಈ ಪ್ರದೇಶದ ನಿವಾಸಿಗಳು ಸಮಸ್ಯೆಗಳಿಂದ ದಿನದೂಡುತ್ತಿದ್ದಾರೆ .ಅನ್ನ ಆಹಾರವನ್ನು ಸೇವಿಸಲಿಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿ ಪುಟ್ಟ ಮಕ್ಕಳು ಹಾಗೂ ಹೃದಯ ಸಂಬಂಧಿ ಹಾಗೂ ಶಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು ಇಲ್ಲಿಂದ ಹೊರ ಊರುಗಳಿಗೆ ಗುಳೆ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದಂತಹ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಇಂದು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಇವರ ನೇತೃತ್ವದ ನಿಯೋಗದೊಃದಿಗೆ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಿ ಅಲ್ಲಿನ ನಾಗರಿಕರ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಿ ಪಡಿಸಿದರು .ಮುಂದಿನ ದಿನಗಳಲ್ಲಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಬಲಾಢ್ಯ ಶಕ್ತಿಗಳಿಗೆ ಮಣಿಯದೆ ಜನರಿಗೆ ಮಾರಕವಾದ ಅಣಬೆ ಫ್ಯಾಕ್ಟರಿಗೆ ಬೀಗ ಜಡಿದು ಆಶ್ರಯ ನಗರದ ನಿವಾಸಿಗಳ ನೆಮ್ಮದಿಯ ಬದುಕಿಗೆ ಸಹಕಾರ ನೀಡಬೇಕು ಇಲ್ಲದಿದ್ದರೆ ಈ ವಿಚಾರದಲ್ಲಿ ತೀವ್ರ ರೀತಿಯಾದಂತಹ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅನ್ವರ್ ಸಾದತ್ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಸ್ಥಳ ಪರಿಶೀಲನೆ ನಡೆಸಿದ ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ ಹಾಗೂ ಸ್ಥಳೀಯ ಮುಖಂಡರಾದ ರಿಯಾಜ್ ವಾಮಂಜೂರು ಇಕ್ಬಾಲ್ ವಾಮಂಜೂರು ಉಪಸ್ಥಿತರಿದ್ದರು

Join Whatsapp