ಶಬಾನಾ ಅಝ್ಮಿ, ನಾಸಿರುದ್ದೀನ್ ಶಾ ತುಕುಡೆ ಗ್ಯಾಂಗ್’ನ ಏಜೆಂಟರು: ನಾಲಗೆ ಹರಿಯಬಿಟ್ಟ ಮಧ್ಯಪ್ರದೇಶ ಸಚಿವ

Prasthutha|

ನವದೆಹಲಿ: ಚಲನಚಿತ್ರ ದಿಗ್ಗಜರಾದ ಶಬಾನಾ ಅಝ್ಮಿ, ನಾಸಿರುದ್ದೀನ್ ಶಾ ಮತ್ತು ಜಾವೇದ್ ಅಖ್ತರ್ ಅವರು ತುಕ್ಡೆ – ತುಕ್ಡೆ ಗ್ಯಾಂಗ್’ನ ಏಜೆಂಟರು ಎಂದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮುಸ್ಲಿಮರ ವಿರುದ್ಧ ತನ್ನ ನಾಲಗೆ ಹರಿಯಬಿಟ್ಟಿದ್ದಾರೆ.

- Advertisement -

ಇಬ್ಬರು ನಟರು ಮತ್ತು ಸಾಹಿತಿಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಸಮಸ್ಯೆಗಳ ಕುರಿತು ಮಾತ್ರ ಧ್ವನಿ ಎತ್ತುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಮೇಲಿನ ನಟರು ತುಕ್ಡೆ ತುಕ್ಡೆ ಗ್ಯಾಂಗ್’ನ ಸ್ಲೀಪರ್ ಸೆಲ್’ನ ಏಜೆಂಟ್’ಗಳು. ಅವರು ಕೇವಲ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆಯುವ ಘಟನೆಗಳ ಕುರಿತು ಗೊಂದಲ ಸೃಷ್ಟಿಸುತ್ತಾರೆ ಎಂದು ಮಿಶ್ರಾ ದೂರಿದ್ದಾರೆ.

- Advertisement -

15 ವರ್ಷಗಳ ಬಳಿಕ ಗುಜರಾತ್ ಸರ್ಕಾರವು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಘಟನೆಯನ್ನು ಮಾತ್ರ ಅಝ್ಮಿ ಅವರು ನೆನಪಿನಲ್ಲಿಟ್ಟುಕ್ಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ನಡೆದ ಘಟನೆಗಳ ಬಗ್ಗೆ ಅಝ್ಮಿ ಅವರಿಗೆ ತಿಳಿದಿಲ್ಲ ಮತ್ತು ಅವರು ಅದರ ವಿರುದ್ಧ ಧ್ವನಿಯೆತ್ತುವುದಿಲ್ಲ ಎಂದು ಮಿಶ್ರಾ ಆರೋಪಿಸಿದ್ದಾರೆ.

ರಾಜಸ್ಥಾನದಲ್ಲಿ ಕನ್ಹಯ್ಯಾ ಲಾಲ್ ಹತ್ಯೆ ಅಥವಾ ಜಾರ್ಖಂಡ್’ನಲ್ಲಿ ಸಜೀವ ದಹನಕ್ಕೊಳಗಾದ ಮಹಿಳೆಯ ಬಗ್ಗೆ ಶಬಾನಾ ಅಝ್ಮಿ ಯಾಕೆ ಮಾತನಾಡುತ್ತಿಲ್ಲ ಎಂದು ಮಿಶ್ರಾ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರದ ವಿರುದ್ಧ ಕೆಲವು ಮಹಿಳಾ ಸಂಘಟನೆ ಮತ್ತು ವಿದ್ಯಾರ್ಥಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅಝ್ಮಿ ಅವರು ಭಾಗವಹಿಸಿದ್ದರು.

Join Whatsapp