ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ| ಸಂಘಪರಿವಾರದ ಕಾರ್ಯಕರ್ತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು 

Prasthutha|

ಮಡಿಕೇರಿ: ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡ್ಲಿಪೇಟೆ ಹೋಬಳಿ ಮೂಲದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಘಟನೆ ನಡೆದಿದ್ದು, ಈ ಸಂಬಂಧ ಸಂಘಪರಿವಾರದ ಕಾರ್ಯಕರ್ತ ದಿನೇಶ ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

- Advertisement -

ಕೊಡ್ಲಿಪೇಟೆ ನಗರದಲ್ಲಿ ಸ್ವದೇಶಿ ಭಂಡಾರ ಅಂಗಡಿ ನಡೆಸುತ್ತಿರುವ ಸಂಘಪರಿವಾರದ ಕಾರ್ಯಕರ್ತ ದಿನೇಶನ (50) ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಸಂಘಪರಿವಾರದ ಕಾರ್ಯಕರ್ತ ದಿನೇಶ

  ಮನೆಯಲ್ಲಿ ಹೊರಗೆ ಹೋಗಿ ಹಿಂದಿರುಗಿ ಬಂದಾಗ ದಿನೇಶ ಎಂಬಾತ ನಮ್ಮ ಮನೆಯ ಕೋಣೆಯಲ್ಲಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದು, ನಮ್ಮನ್ನು ಕಂಡ ಕೂಡಲೇ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ ಎಂದು ಸಂತ್ರಸ್ತೆಯ ಪೋಷಕರು ಶನಿವಾರಸಂತೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ

- Advertisement -

ಕೃತ್ಯ ಡಿಸೆಂಬರ್ 9 ರಂದು ನಡೆದಿದ್ದು, ಘಟನೆ ನಡೆದು ಒಂದು ತಿಂಗಳು ಕಳೆದರೂ ಆರೋಪಿಯ ಬಂದನವಾಗಿಲ್ಲ. ಆರೋಪಿಯನ್ನು ಶೀಘ್ರವಾಗಿ ಬಂಧಿಸುವಂತೆ ಸಂತ್ರಸ್ಥೆಯ ಪೋಷಕರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಆಗ್ರಹಿಸಿದ್ದಾರೆ,

Join Whatsapp