ಕಿರುತೆರೆ ನಟಿ ರಶ್ಮಿರೇಖಾ ಶವವಾಗಿ ಪತ್ತೆ !

Prasthutha|


ಭುವನೇಶ್ವರ್: ಒಡಿಶಾದ ಖ್ಯಾತ ಕಿರುತೆರೆ ನಟಿ ರಶ್ಮಿರೇಖಾ ಓಜಾ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಶಂಕಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

- Advertisement -


ರಶ್ಮಿರೇಖಾ ಇಲ್ಲಿನ ನಯಾಪಲ್ಲಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಸ್ನೇಹಿತ ಸಂತೋಷ್ ನೊಂದಿಗೆ ಸಹಜೀವನ ಲಿವ್-ಇನ್ ರಿಲೇಷನ್ಶಿಪ್ ನಡೆಸುತ್ತಿದ್ದರು.


ಕಳೆದ ರಾತ್ರಿ ತನ್ನ ಬಾಡಿಗೆ ಮನೆಯ ಸೀಲಿಂಗ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ವೇಳೆ ಅಲ್ಲಿ ‘ತನ್ನ ಸಾವಿಗೆ ಯಾರೂ ಕಾರಣರಲ್ಲʼ ಎಂದು ಬರೆದಿರುವ ಚೀಟಿ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆಯ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೆ ಪೊಲೀಸರು ಕಾಯುತ್ತಿದ್ದಾರೆ.

- Advertisement -


ಪೊಲೀಸರ ಮಾಹಿತಿಯ ಪ್ರಕಾರ, ‘ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬ ಚೀಟಿ ಬಿಟ್ಟು ಸಿಕ್ಕಿರುವುದರಿಂದ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತೋರುತ್ತದೆ’ ಎಂದು ತಿಳಿಸಿದ್ದಾರೆ.
ಜಗತ್ ಸಿಂಗ್ ಪುರ ಜಿಲ್ಲೆಯವರಾದ ರಶ್ಮಿರೇಖಾ ಓಜಾ ಅವರು ದೈನಂದಿನ ಸೋಪ್ ಕೆಮಿತಿ ಕಹಿಬಿ ಕಹಾದಲ್ಲಿನ ಪಾತ್ರದೊಂದಿಗೆ ಖ್ಯಾತಿ ಗಳಿಸಿದ್ದರು.



Join Whatsapp