ಪ್ಯಾಲೆಸ್ತೀನ್ ಜನರಿಗೆ 38 ಟನ್ ಆಹಾರ, ವೈದ್ಯಕೀಯ ವಸ್ತುಗಳನ್ನು ಕಳುಹಿಸಿದ್ದೇವೆ: ವಿಶ್ವಸಂಸ್ಥೆಯಲ್ಲಿ ಭಾರತ ವಿವರಣೆ

Prasthutha|

ನವದೆಹಲಿ: ಇಸ್ರೇಲ್ ಆಕ್ರಮನ ಪೀಡಿತ ಗಾಝಾ ಪ್ರದೇಶಕ್ಕೆ 38 ಟನ್ ಆಹಾರ ಮತ್ತು ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಕಳುಹಿಸಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ (ಡಿಪಿಆರ್) ಹೇಳಿದ್ದಾರೆ.

- Advertisement -

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಪ್ಯಾಲೆಸ್ತೀನ್ ಪ್ರಶ್ನೆ ಸೇರಿದಂತೆ ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಕುರಿತು ಭಾರತವನ್ನು ಪ್ರತಿನಿಧಿಸಿದ ರವೀಂದ್ರ ಈ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಹಗೆತನದ ಇತ್ತೀಚಿನ ಅಧ್ಯಾಯದ ಬಗ್ಗೆ ಮುಕ್ತ ಚರ್ಚೆಗಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಧನ್ಯವಾದ ಅರ್ಪಿಸಿದ ಅವರು, ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕರ ದೊಡ್ಡ ಪ್ರಮಾಣದ ನಷ್ಟದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.

- Advertisement -

ಭಾರತವು ಪ್ಯಾಲೆಸ್ತೀನ್ ಜನರಿಗೆ ಔಷಧಿಗಳು ಮತ್ತು ಸಲಕರಣೆಗಳು ಸೇರಿದಂತೆ 38 ಟನ್ ಮಾನವೀಯ ವಸ್ತುಗಳನ್ನು ಕಳುಹಿಸಿದೆ. ಶಾಂತಿಗೆ ಅಗತ್ಯವಾದ ಪರಿಸ್ಥಿತಿಗಳನ್ನು ಸೃಷ್ಟಿಸಲು ಮತ್ತು ಮತ್ತು ಹಿಂಸಾಚಾರವನ್ನು ನಿಲ್ಲಿಸಲು ಸೇರಿದಂತೆ ನೇರ ಮಾತುಕತೆಗಳನ್ನು ಪುನರಾರಂಭಿಸಲು ಕೆಲಸ ಮಾಡುವಂತೆ ನಾವು ಪಕ್ಷಗಳನ್ನು ಒತ್ತಾಯಿಸುತ್ತೇವೆ ಎಂದು ರವೀಂದ್ರ ಹೇಳಿದ್ದಾರೆ.

ಇಸ್ರೇಲ್ನಲ್ಲಿ ಅಕ್ಟೋಬರ್ 7 ರಂದು ನಡೆದ  ದಾಳಿಯೂ ಆಘಾತಕಾರಿ ಮತ್ತು ಭಾರತವು ಅವುಗಳನ್ನು  ಖಂಡಿಸಿದೆ ಎಂದೂ ವಿಶ್ವಸಂಸ್ಥೆಯ ಉಪ ಖಾಯಂ ರಾಯಭಾರಿ ಹೇಳಿದ್ದಾರೆ.

ಗಾಝಾದ ಅಲ್ ಹಾಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತ ಜೀವಹಾನಿಯ ಬಗ್ಗೆ ನಾವು ತೀವ್ರ ಆಘಾತ ವ್ಯಕ್ತಪಡಿಸಿದ್ದೇವೆ. ಅಲ್ಲಿ ನೂರಾರು ನಾಗರಿಕರ ಸಾವುನೋವುಗಳು ಸಂಭವಿಸಿದ್ದು,  ಸಾವಿರಾರು ಜನರು ಗಾಯಗೊಂಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ ಎಂದು ವಿಶ್ವ ಸಂಸ್ಥೆಗೆ ಭಾರತದ ಉಪ ಖಾಯಂ ರಾಯಭಾರಿ ಹೇಳಿದ್ದಾರೆ.

Join Whatsapp