ಜೈಲರ್ ವಿಲನ್ ವಿನಾಯಕನ್ ಬಂಧನ

Prasthutha|

ಕೊಚ್ಚಿ: ಕಂಠಪೂರ್ತಿ ಕುಡಿದು ಸಾರ್ವಜನಿಕವಾಗಿ ಅಡಚಣೆ ಉಂಟುಮಾಡಿದ ಜೈಲರ್ ವಿಲನ್ ಖ್ಯಾತಿಯು ನಟ ವಿನಾಯಕನ್ ರವರನ್ನು ಕೇರಳದ ಎರ್ನಾಕುಲಂ ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವಿನಾಯಕನ್ ಠಾಣೆಯ ಕಾರ್ಯಾಚರಣೆಗೂ ಅಡ್ಡಿಪಡಿಸಿದ್ದಾರೆ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ವಿನಾಯಕನ್ ಮಲಯಾಳಂ ಚಿತ್ರರಂಗದ ಖ್ಯಾತ ನಟ. ಕಾಲಿವುಡ್ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಆದ ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಮುಖ್ಯ ಖಳನಾಯಕನಾಗಿ ನಟಿಸಿ ಇಡೀ ಭಾರತದಲ್ಲಿಯೇ ಫೇಮಸ್ ಆಗಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕವೇ ವಿನಾಯಕನ್ ಜೈಲರ್ ಸಿನಿಮಾದಲ್ಲಿ ವಿಜೃಂಭಿಸಿದ್ದರು.

ತಾವು ತಂಗಿರುವ ಅಪಾರ್ಟ್ಮೆಂಟ್ನಲ್ಲಿ ವಿನಾಯಕನ್ ಗಲಾಟೆ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಲಾಯಿತು. ಠಾಣೆಯಲ್ಲೂ ಕುಡಿದ ಅಮಲಿನಲ್ಲಿ ವಿನಾಯಕನ್ ರಂಪಾಟ ಮಾಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ.

- Advertisement -

ವಿನಾಯಕನ್ ಬಂಧನದ ಬಳಿಕ ಅವರನ್ನು ಆಲ್ಕೋಹಾಲ್ ಪರೀಕ್ಷೆಗಾಗಿ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಅವರ ವಿರುದ್ಧ ದೂರು ದಾಖಲಿಸಿ, ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದ ನಂತರ ವಿನಾಯಕನ್. ಬಳಿಕ ನಟನ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು ಮತ್ತು ಪ್ರಕರಣ ಸಹ ದಾಖಲಾಗಿತ್ತು. ವಿನಾಯಕನ್ ಅವರ ಎಡವಟ್ಟುಗಳು ಒಂದೆರೆಡಲ್ಲ. ಕಳೆದ ವರ್ಷ ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಬಗ್ಗೆ ಕೇಳುವುದು ‘ಮೀ ಟೂ’ ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದಿದ್ದರು.