ನಿಮ್ಮ ಮಕ್ಕಳನ್ನು ದೇಶದ ಗಡಿ ಕಾಯಲು ಕಳುಹಿಸಿ: ನವಜೋತ್ ಸಿಧು ವಿರುದ್ಧ ಕಿಡಿಕಾರಿದ ಸಂಸದ ಗೌತಮ್ ಗಂಭೀರ್

Prasthutha|

ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹಿರಿಯ ಸಹೋದರ ಎಂದು ಕರೆದಿದ್ದನ್ನು ನೆಪವಾಗಿಟ್ಟು ಪಂಜಾಬ್ ಕಾಂಗ್ರೆಸ್ ನ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ತೀವ್ರ ತರಾಟೆಗೆ ತೆಗೆದುಕೊಂಡ ಸಂಸದ ಗೌತಮ್ ಗಂಭೀರ್, ಈ ರೀತಿಯ ಹೇಳಿಕೆ ನೀಡುವ ಮೊದಲು ನಿಮ್ಮ ಮಕ್ಕಳನ್ನು ಗಡಿ ಕಾಯಲು ಕಳುಹಿಸಿ ಎಂದು ಕಿಡಿಕಾರಿದ್ದಾರೆ.

- Advertisement -

ಭಾರತವು 70 ವರ್ಷಗಳಿಂದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತ ಹೋರಾಟ ನಡುಸುತ್ತಿದೆ ಮತ್ತು ಪಾಕಿಸ್ತಾನದ ಪ್ರಧಾನಿಯನ್ನು ಇಮ್ರಾನ್ ಖಾನ್ ಅವರನ್ನು ಸಿಧು, ತನ್ನ ಸಹೋದರ ಎಂದು ಕರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಕ್ರಿಕೆಟಿಗ, ಸಂಸದ ಗಂಭೀರ್ ಟ್ವೀಟ್ ಮೂಲಕ ಆರೋಪಿಸಿದ್ದಾರೆ.

ಫ್ಯಾಶಿಸ್ಟ್ ವರ್ಗಗಳು ಭಾರತದೆಲ್ಲೆಡೆ ಗುಂಪುಹತ್ಯೆ, ಹಿಂಸೆ, ದೌರ್ಜನ್ಯ ವ್ಯಾಪಕಗೊಳಿಸಿ ಭಯೋತ್ಪಾದನೆ ಮತ್ತು ಭೀತಿಯ ವಾತಾವರಣ ನಿರ್ಮಿಸುತ್ತಿರುವ ನಡುವೆ ಗೌತಮ್ ಗಂಭೀರ್ ಅವರ ಹೇಳಿಕೆ ವಿಪರ್ಯಾಸ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಮಾತ್ರವಲ್ಲ ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ಭೇಟಿ ನೀಡಿ ಅಂದಿನ ಪ್ರಧಾನಿ ನವಾಝ್ ಶರೀಪ್ ಅವರೊಂದಿಗೆ ಬಿರಿಯಾನಿ ತಿಂದು ಬಂದಿದ್ದನು ಮರೆತು ಹೇಳಿಕೆ ನೀಡುತ್ತಿರುವುದು ದುರಂತ ಎಂದು ನೆಟ್ಟಿಗರು ಗುಡುಗಿದ್ದಾರೆ.

ಇತ್ತೀಚೆಗೆ ಕಾಶ್ಮೀರದ ಹೈದರ್ ಪೊರ ಎಂಬಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ನೆಪದಲ್ಲಿ ಅಮಾಯಕರನ್ನು ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್, ದೌರ್ಜನ್ಯದ ದೇಶದೆಲ್ಲೆದೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಗೌತಮ್ ಅವರ ಹೇಳಿಕೆ ನಾಚಿಕೆ ಗೇಡಿನ ಸಂಗತಿ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.

ಪಾಕಿಸ್ತಾನದ ಕರ್ತಾರ್ ಪುರದ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಧು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿದ್ದರು ಎಂದು ಆರೋಪಿಸಿ ಗೌತಮ್ ಗಂಭೀರ್ ಈ ಹೇಳಿಕೆ ನೀಡಿದ್ದರು.



Join Whatsapp