ತುಳಸಿ ನೆಪದಲ್ಲಿ ಗಾಂಜಾ ಮಾರಾಟ: ಅಮೆಜಾನ್ ವಿರುದ್ಧ ಕೇಸ್

Prasthutha|

ನವದೆಹಲಿ: ಆನ್‌ಲೈನ್ ಗಾಂಜಾ ಮಾರಾಟ ದಂಧೆಯನ್ನು ಭೇದಿಸಿರುವ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಪೊಲೀಸರು ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

- Advertisement -

ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಸೈಕೋಟ್ರೋಪಿಕ್‌ ಸಬ್‌ಸ್ಟೆನ್ಸ್(ಎನ್‌ಡಿಪಿಎಸ್) ಕಾಯ್ದೆಯ ಸೆಕ್ಷನ್ 38 ಅಡಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು‌ ಕೈಗೊಳ್ಳಲಾಗಿದೆ ಎಂದು ಭಿಂಡ್ ಪೊಲೀಸ್ ಅಧೀಕ್ಷಕ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕಳೆದ ನ.13ರಂದು ಗ್ವಾಲಿಯರ್ ನ ಬಿಜೇಂದ್ರ ತೋಮರ್ ಮತ್ತು ಸೂರಜ್ ಅಲಿಯಾಸ್ ಕಲ್ಲು ಪಾವಯ್ಯ ಅವರಿಂದ 21.7 ಕೆಜಿ ಗಾಂಜಾ ವಶಪಡಿಸಿಕೊಂಡ ನಂತರ ಜಿಲ್ಲೆಯ ಗೋಹಾಡ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಹೇಳಿದರು.

- Advertisement -

ಕಠಿಣ ಕ್ರಮಕ್ಕೆ ಸಿಎಟಿ ಆಗ್ರಹ:

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಟಿ)ವು ವಿಷಯದ ಬಗ್ಗೆ ಕೇಂದ್ರ ಸರ್ಕಾರದಿಂದ ತಕ್ಷಣದ ಕ್ರಮಕ್ಕೆ ಒತ್ತಾಯಿಸಿ, ಮಾರಾಟಗಾರನಂತೆ ವರ್ತಿಸಿದ ಅಮೆಜಾನ್ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ(ಎನ್‌ಸಿಬಿ) ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಹಣ ಸಂಗ್ರಹಿಸಿ, ಅವರ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿ, ಕಮಿಷನ್ ಗಳಿಸಿದ್ದಾರೆ ಮತ್ತು ಆರ್ಯನ್ ಖಾನ್ ವಿರುದ್ಧ ಹೊರಿಸಲಾದ ಆರೋಪಗಳಿಗಿಂತ ಗಂಭೀರವಾದ ಕೆಲಸವನ್ನು ಮಾಡಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

ಅಕ್ರಮ ಹಣ ವರ್ಗಾವಣೆ ಆರೋಪ

ಈ ಅಕ್ರಮಕ್ಕಾಗಿ ಅಮೆಜಾನ್ ಮತ್ತು ಅದರ ಉನ್ನತ ನಿರ್ವಹಣೆಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಮತ್ತು ಕ್ರಿಮಿನಲ್ ಕೇಸ್ ದಾಖಲಿಸಲು ಖಂಡೇಲ್ವಾಲ್ ಒತ್ತಾಯಿಸಿದ್ದಾರೆ.

Join Whatsapp