ಕಂಗನಾ ರಣಾವತ್‌ ವಿರುದ್ಧ ದೇಶದ್ರೋಹದ ದೂರು !

Prasthutha|

ಹೊಸದಿಲ್ಲಿ: ‘1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ,  ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ’  ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ನೀಡಿರುವ ದೇಶದ್ರೋಹದ ಹೇಳಿಕೆ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಪ್ರೀತಿ ಮೆನನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

ರಾಷ್ಟ್ರೀಯ ಮಾಧ್ಯಮ ನೆಟ್‌ವರ್ಕ್‌ನ ವಾರ್ಷಿಕ ಶೃಂಗಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಂಗನಾ,  ದೇಶದ ಸ್ವಾತಂತ್ರ್ಯವನ್ನು “ವೋ ಆಜಾದಿ ನಹೀ ಥಿ, ವೋ ಭೀಕ್ ಥಿ. ಔರ್ ಜೋ ಆಜಾದಿ ಮಿಲಿ ಹೈ ವೋ 2014 ಮೈ ಮಿಲಿ ಹೈ” (ಅದು ಸ್ವಾತಂತ್ರ್ಯವಲ್ಲ,  ಭಿಕ್ಷೆಯಾಗಿತ್ತು) ಎಂದಿದ್ದಾರೆ.  ಮೋದಿಯವರನ್ನು ಹೊಗಳಲು ಆಕೆ ಆ ರೀತಿ ಹೇಳಿದ್ದಾರೆ. ಜೊತೆಗೆ  “2014 ರಲ್ಲಿ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು” ಎಂದು ಕೂಡ ರಣಾವತ್  ಹೇಳಿಕೆ ನೀಡಿದ್ದರು.

ಕಂಗನಾ ರಣಾವತ್ ಅವರ ದೇಶದ್ರೋಹ ಹಾಗೂ ಪ್ರಚೋದಿತ ಹೇಳಿಕೆಗಳಿಗಾಗಿ 504, 505 ಹಾಗೂ  124A ಅಡಿಯಲ್ಲಿ ಕ್ರಮಕ್ಕಾಗಿ ಪ್ರೀತಿ ಶರ್ಮಾ ಮೆನನ್ ಅವರು ಅರ್ಜಿಯನ್ನು ಮುಂಬೈ ಪೊಲೀಸರಿಗೆ ಸಲ್ಲಿಸಿದ್ದಾರೆ.  

Join Whatsapp