ಗಾಝಾದಲ್ಲಿ ಕದನ ವಿರಾಮಕ್ಕೆ ಬದ್ಧರಾಗಿರಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ

Prasthutha|

ನ್ಯೂಯಾರ್ಕ್‌ : ಗಾಝಾದಲ್ಲಿ ಇಸ್ರೇಲ್‌ ಮತ್ತು ಪೆಲೆಸ್ತೀನ್‌ ನಡುವಿನ ಸಂಘರ್ಷದ ಬಗ್ಗೆ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ. ಪ್ರದೇಶದಲ್ಲಿ ಘೋಷಿಸಲಾಗಿರುವ ಕದನ ವಿರಾಮಕ್ಕೆ ಸಂಪೂರ್ಣ ಬದ್ಧವಾಗಿರುವಂತೆ ಭದ್ರತಾ ಮಂಡಳಿಯು ಕರೆ ನೀಡಿದೆ.

ಕದನ ವಿರಾಮ ಘೋಷಣೆಯನ್ನು ಭದ್ರತಾ ಮಂಡಳಿ ಸ್ವಾಗತಿಸಿದೆ. ಅಲ್ಲದೆ, ಪ್ರದೇಶದಲ್ಲಿ ಶಾಂತಿ ನೆಲೆಯಾಗಲು ರಾಜತಾಂತ್ರಿಕ ಮಧ್ಯವರ್ತಿಕೆ ವಹಿಸಲಿಚ್ಚಿಸಿರುವ ರಾಷ್ಟ್ರಗಳ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

- Advertisement -

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಪರಿಶೀಲಿಸಿರುವ ವರದಿಗಳ ಪ್ರಕಾರ, ಯುದ್ಧದಲ್ಲಿ ಆಕ್ರಮಿತ ಪೆಲೆಸ್ತೀನಿಯನ್‌ ಭೂಪ್ರದೇಶದಲ್ಲಿ ಸುಮಾರು 242 ಮಂದಿ ಮೃತಪಟ್ಟಿದ್ದಾರೆ. ಗಾಝಾದ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ವರದಿಗಳ ಪ್ರಕಾರ, 1,948 ಪೆಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ.

ಎರಡು ದೇಶಗಳ ಸೂತ್ರದಲ್ಲಿ ಶಾಂತಿಯನ್ನು ಕಾಪಾಡಬೇಕಿದೆ ಎಂದು ಮಂಡಳಿಯ ಸದಸ್ಯರು ಹೇಳಿದ್ದಾರೆ. ಅಕ್ಕಪಕ್ಕದಲ್ಲಿರುವ ಇಸ್ರೇಲ್‌ ಮತ್ತು ಪೆಲೆಸ್ತೀನ್‌ ನಂತಹ ಎರಡು ಪ್ರಜಾಪ್ರಭುತ್ವ ದೇಶಗಳಿರುವ ಪ್ರಾಂತ್ಯದ ನಿಲುವಿನ ಆಧಾರದಲ್ಲಿ ಸಮಗ್ರ ಶಾಂತಿಯನ್ನು ಕಾಪಾಡಬೇಕಾಗಿದೆ ಮತ್ತು ಪೂರ್ಣ ಪ್ರಮಾಣದ ಶಾಂತಿ ನೆಲೆಸಬೇಕಿದೆ ಎಂದು ಮಂಡಳಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.   

- Advertisement -