ದೆಹಲಿಯ ಎಂಪಿ ಫ್ಲಾಟ್ ನಿಂದ ಭಗವಂತ್ ಮಾನ್ ರನ್ನು ತೆರವುಗೊಳಿಸಲು ಸೆಕ್ರೆಟರಿಯೇಟ್ ಸೂಚನೆ

Prasthutha|

ನವದೆಹಲಿ: ಎಎಪಿ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ವಿರುದ್ಧ ಸಂಸತ್ತಿನ ಸದಸ್ಯರಾಗಿದ್ದಾಗ ಅವರಿಗೆ ಮಂಜೂರು ಮಾಡಲಾದ ಕೇಂದ್ರ ಸರ್ಕಾರದ ನಿವಾಸವನ್ನು “ಅನಧಿಕೃತ” ಆಕ್ರಮಿಸಿಕೊಂಡಿರುವ ಆರೋಪದ ಮೇಲೆ ತೆರವು ಪ್ರಕ್ರಿಯೆ ಆರಂಭಿಸುವಂತೆ ಎಸ್ಟೇಟ್ ನಿರ್ದೇಶನಾಲಯಕ್ಕೆ ಲೋಕಸಭೆ ಸೆಕ್ರೆಟರಿಯೇಟ್ ಸೂಚಿಸಿದೆ.

- Advertisement -

ಎಸ್ಟೇಟ್ ಅಧಿಕಾರಿಯ ಮುಂದೆ ಸೆಕ್ರೆಟರಿಯೇಟ್ ಸಲ್ಲಿಸಿದ ಅರ್ಜಿಯಲ್ಲಿ 17 ನೇ ಲೋಕಸಭೆಯ ಸದಸ್ಯರಾಗಿ ಮಾನ್ ಅವರ ನಿಯಮಿತ ವಸತಿಗಾಗಿ ಕೇಂದ್ರ ಸರಕಾರದ ಡ್ಯೂಪ್ಲೆಕ್ಸ್ ನಂ 33, ನಾರ್ತ್ ಅವೆನ್ಯೂ, ಅದರ ಘಟಕಗಳು ಹಾಗೂ 153 ನಾರ್ತ್ ಅವೆನ್ಯೂವನ್ನು ಮಂಜೂರು ಮಾಡಲಾಗಿತ್ತು ಎಂದು ಹೇಳಿದೆ.

ಎಪ್ರಿಲ್ 14 ರಿಂದ ಜಾರಿಗೆ ಬರುವಂತೆ ಮಾನ್  ಹೆಸರಿನಲ್ಲಿ ಹಂಚಿಕೆ ಮಾಡಲಾದ ನಿವಾಸವನ್ನು ರದ್ದುಗೊಳಿಸಲಾಗಿದೆ” ಎಂದು ಅದು ಹೇಳಿದೆ.  ಆದರೆ ಮಾನ್ ಅವರು ಕಟ್ಟಡವನ್ನು ಇನ್ನೂ ಖಾಲಿ ಮಾಡಿಲ್ಲ.

- Advertisement -

“ಎಪ್ರಿಲ್ 13 ರ ನಂತರ ಮಾಜಿ ಸಂಸದರು ಕಟ್ಟಡದಲ್ಲಿ ನೆಲೆಸಿರುವುದು  “ಅನಧಿಕೃತ” . ಆದ್ದರಿಂದ ಭಗವಂತ್ ಮಾನ್, ಮಾಜಿ ಸಂಸದ ಹಾಗೂ ಎಲ್ಲಾ ವ್ಯಕ್ತಿಗಳ ಉಚ್ಚಾಟನೆಗೆ ಪ್ರಕ್ರಿಯೆಗಳನ್ನು ಆರಂಭಿಸಬಹುದು ಮತ್ತು ಅವರ ಹೊರಹಾಕುವಿಕೆಗೆ ಆದೇಶವನ್ನು ರವಾನಿಸಬಹುದು” ಎಂದು ಎಸ್ಟೇಟ್ ಅಧಿಕಾರಿಗೆ ಲೋಕಸಭೆ ಸೆಕ್ರೆಟರಿಯೇಟ್ ಕಳುಹಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಪಂಜಾಬ್ ನ ಮುಖ್ಯಮಂತ್ರಿಯಾಗಲು ಮಾನ್ ಮಾರ್ಚ್ ನಲ್ಲಿ ಸಂಗ್ರೂರ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.



Join Whatsapp