ಬೆಂಗಳೂರು 2024ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪುನರಾರ್ತಿತ ಅಭ್ಯರ್ಥಿಗಳು ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಗುರುವಾರ (ಏ. 18) ಸಂಜೆ 5 ಗಂಟೆಯವರಿಗೆ ಅವಕಾಶ ವಿಸ್ತರಿಸಲಾಗಿದೆ.
ಈ ಮೊದಲು ದಂಡ ರಹಿತವಾಗಿ ವಾರ್ಷಿಕ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಏ. 16 ಕೊನೆಯ ದಿನ ಎಂದು ಮಂಡಳಿ ತಿಳಿಸಿತ್ತು.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-1ನ್ನು ಹಾಜರಾತಿ ಕೊರತೆಯ ಕಾರಣ ಬರೆಯಲು ಸಾಧ್ಯವಾಗದ ಹಾಗೂ ಮಾರ್ಚ್ 31ಕ್ಕೆ 17 ವರ್ಷ ತುಂಬಿದ ಕಲಾ ಹಾಗೂ ವಾಣಿಜ್ಯ ವಿಭಾಗದ ಅರ್ಹ ಅಭ್ಯರ್ಥಿಗಳು ಖಾಸಗಿ ಅಭ್ಯರ್ಥಿಗಳಾಗಿ ಕಾಲೇಜಿನಲ್ಲಿ ನೋಂದಾಯಿಸಿಕೊಳ್ಳಲು ಕೂಡ ಏ.18 ಕೊನೆಯ ದಿನವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ತಿಳಿಸಿದೆ.