ದುಬೈನಲ್ಲಿ ಭಾರಿ ಮಳೆ: ವಿಮಾನಗಳ ಹಾರಾಟ ಸ್ಥಗಿತ

Prasthutha|

ದುಬೈ: ಕಳೆದ 24 ಗಂಟೆಗಳಿಂದ ಯುಎಇನಲ್ಲಿ ಭಾರಿ ಮಳೆಯಾಗುತ್ತಿದ್ದು ವಿಮಾನ ನಿಲ್ದಾಣ ಜಲಾವೃತಗೊಂಡಿದೆ.

- Advertisement -

ಹತ್ತಾರು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

ಮಳೆಯಿಂದಾಗಿ ಯುಎಇಯ ಪ್ರಮುಖ ಹೆದ್ದಾರಿಗಳ ಭಾಗಗಳು ಜಲಾವೃತಗೊಂಡವು ಮತ್ತು ದುಬೈನಾದ್ಯಂತ ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಂಡಿವೆ. ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಹಲವು ವಿಮಾನಗಳು ರದ್ದಾಗಿದ್ದು, ಹಲವು ವಿಮಾನಗಳು ವಿಳಂಬಗೊಂಡಿದ್ದವು.

- Advertisement -

ಭಾರೀ ಮಳೆಯಿಂದಾಗಿ, ಯುಎಇ ಆಡಳಿತವು ಮಂಗಳವಾರ ಜನರನ್ನು ತಮ್ಮ ಮನೆಗಳಲ್ಲಿ ಇರುವಂತೆ ವಿನಂತಿಸಿದೆ. ಶಾಲೆಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿದ್ದವು. ಸರ್ಕಾರಿ ನೌಕರರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

Join Whatsapp