ನವೆಂಬರ್ 1 ರಿಂದ ವಾಹನಗಳಲ್ಲಿ ಕುಳಿತುಕೊಳ್ಳುವ ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ

Prasthutha|

ಮುಂಬೈ: ನವೆಂಬರ್ 1 ರಿಂದ ವಾಹನಗಳಲ್ಲಿ ಕುಳಿತುಕೊಳ್ಳುವ ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಬಳಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಮುಂಬೈ ಸಂಚಾರ ಪೊಲೀಸರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

- Advertisement -

ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಆಧಾರದ ಮೇಲೆ . ಇದರರ್ಥ ಹಿಂಬದಿಯ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸಬೇಕಾಗುತ್ತದೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 4 ರಂದು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಮರಣವು ಸೀಟ್ ಬೆಲ್ಟ್‌ಗಳ ಪ್ರಾಮುಖ್ಯತೆಯ ಮೇಲೆ ಮತ್ತೆ ಗಮನ ಹರಿಸಿದೆ. KPMG ಗ್ಲೋಬಲ್ ಸ್ಟ್ರಾಟಜಿ ಗ್ರೂಪ್‌ನ ನಿರ್ದೇಶಕ ಜಹಾಂಗೀರ್ ಪಾಂಡೋಲ್ ಅವರೊಂದಿಗೆ ಮಿಸ್ತ್ರಿ ಅವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಇಬ್ಬರೂ ಸೀಟ್ ಬೆಲ್ಟ್ ಧರಿಸಿರಲಿಲ್ಲ ಮತ್ತು ಇಬ್ಬರೂ ಬದುಕುಳಿಯಲಿಲ್ಲ.

- Advertisement -

ಈ ಕಾರಣದಿಂದ ನ.1ರ ನಂತರ ಮುಂದಿನ ಮತ್ತು ಹಿಂಬದಿ ಸೀಟಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.



Join Whatsapp