ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ನಡೆಸುವ ಪ್ರತಿಭಟನೆಗೆ SDTU ಬೆಂಬಲ

Prasthutha|

ಬೆಂಗಳೂರು: ವೇತನ ಶ್ರೇಣಿ, ಆರೋಗ್ಯ ಭದ್ರತೆ, ಸೇವಾ ಭದ್ರತೆ, ಭವಿಷ್ಯ ನಿಧಿ ಇಲ್ಲದೇ ಕೇವಲ ಕನಿಷ್ಠ ವೇತನಕ್ಕೆ ಮಾತ್ರ ಸೇವೆಯನ್ನು ನೀಡುತ್ತಾ ಬಂದಿರುವ ಗ್ರಾಮ ಪಂಚಾಯತ್ ನೌಕರರು ಉಲ್ಲೆಖಿತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಸುವ ಪ್ರತಿಭಟನಾ ಧರಣಿಗೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಕರ್ನಾಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

- Advertisement -

SDTU ರಾಜ್ಯಾಧ್ಯಕ್ಷ ಫಝಲುಲ್ಲಾ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯಕ್ಕೆ ಶಕ್ತಿ ಕೇಂದ್ರ ವಿಧಾನ ಸೌಧವಾದರೆ ಗ್ರಾಮಕ್ಕೆ ಶಕ್ತಿ ಕೇಂದ್ರ ಗ್ರಾಮ ಪಂಚಾಯತ್ ಅಗಿದೆ. ಗ್ರಾಮದ ಸುವ್ಯವಸ್ಥೆಯನ್ನು ನಿರ್ವಹಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುವ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗ್ರಾಮದ ಜನರಿಗಾಗಿ ವಿವಿಧ ಮೂಲಭೂತ ಕೆಲಸ ಕಾರ್ಯಗಳಿಗೆ ನಿಯೋಜಿತಗೊಂಡ ನೌಕರರು ವಿವಿಧ ರೀತಿಯ ಸೌಲಭ್ಯಗಳಿಂದ ವಂಚಿತರಾಗಿರುವುದಕ್ಕೆ ಸರಕಾರದ ನಿರ್ಲಕ್ಷವೇ ಕಾರಣವಾಗಿದೆ ಎಂದು ದೂರಿದ್ದಾರೆ.

ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಸಮಾನತೆಯನ್ನು ಸಾರುವ ಸಮಾಜದ ಪರಿಕಲ್ಪನೆಯ ರಾಮ ರಾಜ್ಯದ ಕನಸಾಗಿತ್ತು ಮಹಾತ್ಮಾ ಗಾಂಧೀಜಿಯದ್ದು. ಅವರ ಪ್ರಕಾರ ಭಾರತದ ಭವಿಷ್ಯವೂ ಹಳ್ಳಿಗಳಲ್ಲಿ ಅಡಗಿದೆ ಎಂದಾಗಿತ್ತು. ಆದರೆ ಸುವ್ಯವಸ್ಥೆಯ ಗ್ರಾಮವನ್ನಾಗಿ ನಿರ್ವಹಿಸಲು ಗ್ರಾಮ ಪಂಚಾಯತ್ ನೌಕರರಿಗೆ ಅಗತ್ಯ ಕ್ಷೇಮಗಳನ್ನೊಳಗೊಂಡ ವ್ಯವಸ್ಥೆಯನ್ನು ಖಾತ್ರಿ ಪಡಿಸದೆ ಗ್ರಾಮದ ಅಭಿವೃದ್ಧಿ ಪಡಿಸಬೇಕೆಂಬ ಪ್ರಯತ್ನ ತುಂಬಾ ತ್ರಾಸದಾಯಕ ಎಂದು ಅವರು ಹೇಳಿದ್ದಾರೆ.

- Advertisement -

ಹಾಗಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕಾಳಜಿ ವಹಿಸಲಿ ಎಂದು ಫಝಲುಲ್ಲಾ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp