SDTU ಅಟೋ ಚಾಲಕರ ಯೂನಿಯನ್ ಘಟಕ ವತಿಯಿಂದ ಸ್ನೇಹ ಸಮ್ಮಿಲನ -ಇಫ್ತಾರ್ ಕೂಟ

Prasthutha|

ಮಂಗಳೂರು: SDTU ಅಟೋ ಚಾಲಕರ ಯೂನಿಯನ್ ಮಂಗಳೂರು ಘಟಕ ವತಿಯಿಂದ ಸ್ನೇಹ ಸಮ್ಮಿಲನ ಮತ್ತು ಇಫ್ತಾರ್ ಕೂಟ ಘಟಕ ಅಧ್ಯಕ್ಷ ಇಲ್ಯಾಸ್ ಬೆಂಗರೆಯವರ ಅಧ್ಯಕ್ಷತೆಯಲ್ಲಿ ನಗರದ ಯತೀಮ್ ಖಾನ ಮಿನಿ ಹಾಲ್ ನಲ್ಲಿ ಮಂಗಳವಾರ ನಡೆಯಿತು.

- Advertisement -

ಬಂದರ್ ಬೂಕ ಮಸೀದಿ  ಖತೀಬ್ ಸಿರಾಜುದ್ದೀನ್ ಖಾಸಿಮಿ, ಎಸ್. ಡಿ.ಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, SDTU ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ದುಬಾಲ್ ಈ ಸಂದರ್ಭದಲ್ಲಿ ಮಾತನಾಡಿದರು.

SDTU ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಕಣ್ಣಂಗಾರ್,  ಎಸ್ ಡಿಪಿಐ ಮಂಗಳೂರು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಕುದ್ರೋಳಿ, SDTU ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಕಣ್ಣೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶರೀಫ್ ಕುತ್ತಾರ್ ಸ್ವಾಗತಿಸಿ ಮುಸ್ತಫಾ ಪರ್ಲಿಯಾ ನಿರೂಪಿಸಿದರು

- Advertisement -

Join Whatsapp