ಬಿಜೆಪಿ ಕ್ಷೇತ್ರಗಳಲ್ಲಿ SDPI ಪ್ರಾಬಲ್ಯ | ಗೋಗಿ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತರ ವಶಕ್ಕೆ !

Prasthutha|

ಶಹಾಪುರ: ಕಳೆದ ಡಿಸಂಬರ್ ನಲ್ಲಿ ರಾಜ್ಯದಲ್ಲಿ ನಡೆದಿದ್ದ ಪಂಚಾಯತ್  ಚುನಾವಣೆಯ ವೇಳೆ ಮತದಾರರ ಪಟ್ಟಿಯಲ್ಲಿರುವ ದೋಷದ ಕಾರಣದಿಂದ ಶಹಾಪುರ ತಾಲೂಕಿನ ಗೋಗಿ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಲ್ಪಟ್ಟಿತ್ತು. ಇದೀಗ ನಡೆದ ಮಾರ್ಚ್ ಅಂತ್ಯದ ವೇಳೆ ನಡೆದ ಚುನಾವಣೆಯಲ್ಲಿ ಗೋಗಿ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿಗರು ವಿಜಯ ಪತಾಕೆ ಹಾರಿಸಿದ್ದಾರೆ. ಒಟು 19 ಕ್ಷೇತ್ರಗಳಿಗೆ ನೆಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು 15 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದಾರೆ. ಆ ಮೂಲಕ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತರು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.

ಇದೇ ವೇಳೆ ಕಳೆದ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ್ದ ಬಿಜೆಪಿಯ ಭದ್ರಕೋಟೆಗಳಲ್ಲಿ ಈ ಬಾರಿ SDPI ಬೆಂಬಲಿತರು ತಮ್ಮ ಪ್ರಾಬಲ್ಯ ಮೆರೆದಿದ್ದು,  ಒಟ್ಟು 3 ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ 4 ಬೆಂಬಲಿತ ಅಭ್ಯರ್ಥಿಗಳಿದ್ದ ಬಿಜೆಪಿಯ ಸಂಖ್ಯೆ ಈ ಬಾರಿ ಕೇವಲ ಒಂದಕ್ಕೆ ಇಳಿದಿದೆ.  ವಾರ್ಡ್ ಸಂಖ್ಯೆ 1 ರಲ್ಲಿ ಬಿಜೆಪಿ ಬೆಂಬಲಿತ ಇಬ್ಬರು ಅಭ್ಯರ್ಥಿಗಳನ್ನು ಸೋಲಿಸಿ ಎಸ್ಡಿಪಿಐ ವಿಜಯಶಾಲಿಯಾಗಿದೆ. ಅದೇ ರೀತಿ ವಾರ್ಡ್ ಸಂಖ್ಯೆ ಆರರಲ್ಲೂ SDPIಯ ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ. ಆ ಮೂಲಕ ಪಂಚಾಯತಿನಲ್ಲಿ ಬಿಜೆಪಿಯ ಪ್ರಾಬಲ್ಯವೀಗ ಕಡಿಮೆಯಾದಂತಾಗಿದೆ.

- Advertisement -