ಲಿಂಗತ್ವ ಅಲ್ಪಸಂಖ್ಯಾತೆಯನ್ನು ಸೆಕ್ಸ್’ಗೆ ಆಹ್ವಾನಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ: ಮಹಿಳಾ ಆಯೋಗಕ್ಕೆ SDPI ಆಗ್ರಹ

Prasthutha|

ಮಂಗಳೂರು: ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ವೇಳೆ ತನ್ನನ್ನು ಸೆಕ್ಸ್’ಗೆ ಆಹ್ವಾನಿಸಿದ್ರು ಎಂದು ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದು, ಈ ಬಗ್ಗೆ ಮಹಿಳಾ ಆಯೋಗ ಸುಮೊಟೊ ಪ್ರಕರಣ ದಾಖಲಿಸಿ ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಎಸ್’ಡಿಪಿಐ ಆಗ್ರಹಿಸಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಡಿಪಿಐ ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಲಿಂಗತ್ವ ಕಾರ್ಯಕರ್ತೆಯರು ನ್ಯಾಯಾಧೀಶರ ಮುಂದೆ ತೋಡಿಕೊಂಡ ಈ ಆರೋಪವು ಗಂಭೀರ ಸ್ವರೂಪದಾಗಿದೆ. ಇಂತಹ ಅಧಿಕಾರಿಗಳು ಪೋಲಿಸ್ ಇಲಾಖೆಯಲ್ಲಿ ಇದ್ದರೆ ಮಹಿಳೆಯರ ರಕ್ಷಣೆ ಹೇಗೆ ಸಾಧ್ಯ?. ಈ ಬಗ್ಗೆ ಮಹಿಳಾ ಆಯೋಗ ಸುಮೊಟೊ ಪ್ರಕರಣ ದಾಖಲಿಸಿ ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.


ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ವೇಳೆ ತನ್ನನ್ನು ಸೆಕ್ಸ್’ಗೆ ಆಹ್ವಾನಿಸಿದ್ರು ಎಂದು ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

Join Whatsapp