ಜೂ.26ರಂದು ದಾವಣಗೆರೆಯಲ್ಲಿ ಎಸ್ ಡಿಪಿಐನಿಂದ ಜನಾಧಿಕಾರ ಸಮಾವೇಶ: ಭರದ ಸಿದ್ಧತೆ

Prasthutha|

ದಾವಣಗೆರೆ: ಬಿಜೆಪಿ ಸರ್ಕಾರದ ದ್ವೇಷ ಮತ್ತು ದುರಾಡಳಿತದ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ದಾವಣಗೆರೆಯಲ್ಲಿ ಜೂನ್ 26ರಂದು “ಬೃಹತ್ ಜನಾಧಿಕಾರ ಸಮಾವೇಶ” ಹಮ್ಮಿಕೊಂಡಿದ್ದು, ಸಮಾವೇಶದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

- Advertisement -


ಸಮಾವೇಶಕ್ಕೆ ಬೃಹತ್ ವೇದಿಕೆ ತಯಾರಾಗುತ್ತಿದ್ದು, ಪ್ರಚಾರ ಕಾರ್ಯಗಳು ಬಿರುಸಿನಿಂದ ನಡೆಯುತ್ತಿವೆ.ದಾವಣಗೆರೆಯ ಮೀಲಾದ್ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಸಮಾವೇಶಕ್ಕೆ ಚಾಲನೆ ದೊರೆಯಲಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರು ಉರಿಲಿಂಗಿ ಪೆದ್ದಿ ಮಠದ ಮಠಾಧೀಶರಾದ ಜ್ಞಾನ ಪ್ರಕಾಶ್ ಸ್ವಾಮೀಜಿ, ಆದಿಜಾಂಬವ ಬೃಹನ್ಮಠ ಹಿರಿಯೂರಿನ ಷಡಕ್ಷರ ಮುನಿ ಸ್ವಾಮೀಜಿ, SDPI ರಾಜ್ಯ ಉಪಾಧ್ಯಕ್ಷೆ ಪ್ರೊ. ಸಾದಿಯಾ ಸಯೀದಾ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ. ಆರ್. ಭಾಸ್ಕರ್ ಪ್ರಸಾದ್ , ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp