ಬೆಳ್ತಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಕಟ್ಟಡ ಒತ್ತುವರಿ ಮಾಡಿ ಮನೆ ಮಾಡಿರುವುದರ ವಿರುದ್ಧ SDPI ತೆಕ್ಕಾರು ಗ್ರಾಮ ಸಮಿತಿ ವತಿಯಿಂದ ನಜೀರ್ ತೆಕ್ಕಾರು ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಮುಖ್ಯ ಅಥಿತಿಯಾಗಿ ಎಸ್’ಡಿಪಿಐ ಬೆಳ್ತಂಗಡಿ ವಿಧಾನಸಭಾಧ್ಯಕ್ಷ ನವಾಝ್ ಕಟ್ಟೆ ಆಗಮಿಸಿದ್ದರು. ತೆಕ್ಕಾರು ಗ್ರಾಮ ಪಂಚಾಯತ್ ಕಟ್ಟಡವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮನೆಯಾಗಿ ಪರಿವರ್ತನೆ ಮಾಡಿರುತ್ತಾರೆ. ಕಟ್ಟಡವನ್ನು ಪಂಚಾಯತ್ ಅಧಿಕಾರಿಗಳು ಹಿಂಪಡೆದು ನೂತನ ಕಟ್ಟಡ ಜನಸೇವೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಇಲ್ಲವಾದಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಜನತೆಯನ್ನು ಸೇರಿಸಿ ತೆಕ್ಕಾರು ಗ್ರಾಮ ಪಂಚಾಯತ್ ಬೀಗ ಜಡಿದು ತೆಕ್ಕಾರು ಚಲೋ ನಡೆಸಲಾಗುವುದು ಮತ್ತು ಇದರಲ್ಲಿ ನೇರ ಶಾಮಿಲಾಗಿರುವ ಪಂಚಾಯತ್ ಅಧಿಕಾರಿಗಳು ಮತ್ತು ಕಾಂಗ್ರೆಸ್, ಬಿಜೆಪಿ ಸದಸ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ನವಾಝ್ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಪಕ್ಷದ ಸಂಘಟನಾ ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ಕೋಶಾಧಿಕಾರಿ ಸಾಲಿ ಮದ್ದಡ್ಕ, ಸ್ಥಳಿಯ ಮುಖಂಡರು ಕ್ಷೇತ್ರ ಸಮಿತಿ ಸದಸ್ಯ ಇನಾಸ್ ರೋಡ್ರಿಗಸ್, ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯ ಅನ್ವಾರ್ ತೆಕ್ಕಾರು, ಬಾರ್ಯ ಗ್ರಾಮ ಪಂಚಾಯತ್ ಸದಸ್ಯ ಫೈಸಲ್ ಮುರುಗೋಳಿ, ಬ್ಲಾಕ್ ಸಮಿತಿ ಸದಸ್ಯರು, ಗ್ರಾಮ ಸಮಿತಿ ಪದಾಧಿಕಾರಿಗಳು, ಸ್ಥಳಿಯ ಮುಖಂಡರು, ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
SDPI ತೆಕ್ಕಾರು ಗ್ರಾಮ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಕಟ್ಟಡ ಉಳಿವಿಗಾಗಿ ಪ್ರತಿಭಟನೆ
Prasthutha|