ಮಂಗಳೂರು: ಪತ್ನಿಯನ್ನು ಉಸಿರುಕಟ್ಟಿಸಿ ಕೊಂದು ಪತಿ ಆತ್ಮಹತ್ಯೆ

Prasthutha|

ಮಂಗಳೂರು: ಪತ್ನಿಯನ್ನು ಉಸಿರು ಕಟ್ಟಿಸಿ ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದ ಕಾಪಿಕಾಡ್ ನಲ್ಲಿ ನಡೆದಿದೆ.  

ಶೈಲಜಾ (64) ಕೊಲೆಗೀಡಾದ ಮಹಿಳೆ. ಅವರ ಪತಿ ದಿನೇಶ್ ರಾವ್ (65) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ.

- Advertisement -

ದಿನೇಶ್ ರಾವ್ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿಯಾಗಿದ್ದರು. ಪತ್ನಿ ಶೈಲಜಾ ಐದಾರು ವರ್ಷಗಳಿಂದ ಅನಾರೋಗ್ಯದಿಂದಾಗಿ ಮಲಗಿದಲ್ಲೇ ಇದ್ದರು. ಶೈಲಜಾ ಅವರನ್ನು ನೋಡಿಕೊಳ್ಳುತ್ತಿದ್ದ ಹೋಮ್ ನರ್ಸ್ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ‌

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

- Advertisement -