ಖ್ಯಾತ ಇತಿಹಾಸಕಾರ ಪ್ರೊ. ಶೇಕ್ ಅಲಿ ನಿಧನಕ್ಕೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂತಾಪ

Prasthutha|

ಬೆಂಗಳೂರು: ಖ್ಯಾತ ಇತಿಹಾಸಕಾರ ಹಾಗೂ ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿ ಪ್ರೊ.ಬಿ ಶೇಖ್ ಅಲಿ ಸಾಹೇಬ್ ಅವರ ನಿಧನ ನಮಗೆಲ್ಲ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

ಪಶ್ಚಿಮ ಗಂಗೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಐತಿಹಾಸಿಕವಾಗಿ ಮಹತ್ವದ ಅಧ್ಯಯನಗಳಿಗೆ ಪ್ರೊ.ಬಿ.ಶೇಖ್ ಅಲಿ ಅವರು ನೀಡಿದ ಕೊಡುಗೆ ಅಪ್ರತಿಮವಾಗಿದೆ. ಮೌಲ್ಯಗಳನ್ನೇ ಮೈವೆತ್ತಿದ್ದ ಶೇಖ್ ಸಾಹಬ್ ಅವರ ಶ್ರದ್ಧೆ ಮತ್ತು ಶೈಕ್ಷಣಿಕ ಶಿಸ್ತಿಗೆ ಯಾವಾಗಲೂ ಸ್ಮರಣೆಯಲ್ಲಿರುತ್ತಾರೆ. ಮುಸ್ಲಿಂ ಹಾಸ್ಟೆಲ್ ಮಸೀದಿಯಲ್ಲಿ ಮಗ್ರಿಬ್ ನಮಾಜ್ ನಂತರ ಅವರ ನಮಾಜ್-ಎ-ಜನಾಜಾವನ್ನು ನಿರ್ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಮೈಸೂರು ಜೈಲ್ ಹಿಂಭಾಗದ ಟಿಪ್ಪು ವೃತ್ತದ ಹಿಂಭಾಗದ ಮುಖ್ಯ ಖಬರಸ್ಥಾನದಲ್ಲಿ ಸಮಾಧಿ ಕಾರ್ಯಗಳು ನೆರವೇರಲಿದೆ.ಅವರ ನಿಧನ ನಮಗೆಲ್ಲ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಆ ಸೃಷ್ಟಿಕರ್ತ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಅಬ್ದುಲ್ ಮಜೀದ್ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp