ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಎಸ್.ಡಿ.ಪಿ.ಐ ನಿಂದ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ

Prasthutha|

ಬೆಂಗಳೂರು: ಅಯೋಧ್ಯೆಯಲ್ಲಿ ಧ್ವಂಸಗೊಳಿಸಿರುವ ಬಾಬರಿ ಮಸ್ಜಿದ್ ಅನ್ನು ಯಥಾ ಸ್ಥಳದಲ್ಲಿ ಪುನರ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ರಾಜ್ಯಾದ್ಯಂತ ಸೋಮವಾರ (ಡಿಸೆಂಬರ್ 6) ಪ್ರತಿಭಟನೆ ನಡೆಸಿದೆ.

- Advertisement -

1992 ರಂದು ಡಿಸೆಂಬರ್ 6 ರಂದು ಸಂಘಪರಿವಾರ ಮತ್ತು ಬಿಜೆಪಿ ಸುಮಾರು ಎಂಟು ದಶಕಗಳ ಸೌಹಾರ್ದತೆಯ ಸಂಕೇತವಾಗಿದ್ದ ಬಾಬರಿ ಮಸ್ಜಿದ್ ಕೆಡವಿ 30 ವರ್ಷಾಚರಣೆಯ ಅಂಗವಾಗಿ ಎಸ್.ಡಿ.ಪಿ. ಐ ರಾಜ್ಯದೆಲ್ಲೆಡೆ ಮಸ್ಜಿದ್ ಅನ್ನು ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿತು.

ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ಮುಲ್ಕಿ- ಮೂಡಬಿದ್ರೆ ಕ್ಷೇತ್ರಾಧ್ಯಕ್ಷ ಆಸೀಫ್ ಕೋಟೆಬಾಗಿಲು, ಅಡ್ವಾಣಿ ಮತ್ತು ತಂಡ ಬಾಬರಿ ಮಸೀದಿ ಉರುಳಿಸಿದೆ. ಆದರೆ ಅದರ ಲಾಭ ವಾಜಪೇಯಿ, ಮೋದಿಯವರಿಗೆ ದಕ್ಕಿದೆ ಎಂದರು. ಬಾಬರಿ ಮಸೀದಿಯನ್ನು ಮತ್ತೆ ಅದೇ ಸ್ಥಳದಲ್ಲಿ ಕಟ್ಟಿ ಕೊಡುವುದರಿಂದ ಮಾತ್ರ ಈ ಸಮಾಜಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ ಎಂದು ಅವರು ಈ ಸಂದರ್ಭಭದಲ್ಲಿ ತಿಳಿಸಿದರು. ಈ ವೇಳೆ ಪ್ರತಿಭಟನಾಕಾರರು ಸಂಘಪರಿವಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

- Advertisement -

ವೇದಿಕೆಯಲ್ಲಿ ಮುನೀಬ್ ಬೆಂಗ್ರೆ, ಅಕ್ಬರ್ ಕುದ್ರೋಳಿ, ಶರೀಫ್ ಪಾಂಡೇಶ್ವರ, ಸುಹೈಲ್ ಖಾನ್ ಪಳ್ನೀರ್, ಸಿದ್ದೀಕ್ ಬೆಂಗ್ರೆ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.

ರಾಜಧಾನಿ ಬೆಂಗಳೂರು, ಮೈಸೂರು, ಕಲಬುರಗಿ, ಗುಂಡ್ಲುಪೇಟೆ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಾಬರಿ ಮಸ್ಜಿದ್ ಅನ್ನು ಯಥಾ ಸ್ಥಳದಲ್ಲಿ ನಿರ್ಮಾಣ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.



Join Whatsapp