ಮಂಗಳೂರಿನ ಕಾಲೇಜುಗಳಲ್ಲೂ ಕೋವಿಡ್ ಆತಂಕ : ಒಂದೇ ದಿನ 15 ವಿದ್ಯಾರ್ಥಿಗಳಲ್ಲಿ ಸೋಂಕು ದೃಢ !

Prasthutha|

ಮಂಗಳೂರು: ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಸೋಂಕಿನ ಪ್ರಮಾಣ ಪತ್ತೆಯಾಗುತ್ತಿದ್ದು ಮೂರನೇ ಅಲೆಯ ಭೀತಿ ಸೃಷ್ಟಿಸಿದೆ. ಈ ನಡುವೆ ರಾಜ್ಯದ ದಕ್ಷಿಣ ಕ್ನನಡ ಜಿಲ್ಲೆಯಲ್ಲಿಯೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಸೋಮವಾರ ಒಂದೇ ದಿನ ಮಂಗಳೂರಿನ ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

- Advertisement -

ಸದ್ಯ ಕಾಲೇಜನ್ನು ಆರೋಗ್ಯ ಇಲಾಖೆ ಕಂಟೇನ್ಮೆಂಟ್ ವಲಯವನ್ನಾಗಿ ಗುರುತಿಸಿದೆ. ಕಳೆದ 10 ದಿನದಲ್ಲಿ ಮಂಗಳೂರಿನಲ್ಲಿ 21 ಜನ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ.

ಇದೇ ವೇಳೆ ರಾಜ್ಯದ ಕೆಲ ಶಾಲಾ ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗಿರುವುದು ಆತಂಕ ಸೃಷ್ಟಿಸಿದೆ ಎಂದು ಹೇಳಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಕೋವಿಡ್ ಸೋಂಕು ತೀವ್ರ ವಾದರೆ ಶಾಲಾ ಕಾಲೇಜುಗಳನ್ನು ಮುಚ್ಚಲು ನಾವು ಸಿದ್ಧರಿದ್ದೇವೆ ಎಂದು ವಿಧಾನ ಸೌಧದಲ್ಲಿಇಂದು ಹೇಳಿದ್ದಾರೆ.

Join Whatsapp