SDPI ಆಡಳಿತವಿರುವ ಸಜೀಪನಡು ಗ್ರಾಮ ಪಂಚಾಯತ್’ಗೆ “ಗಾಂಧಿ ಗ್ರಾಮ” ಪುರಸ್ಕಾರದ ಗರಿ

Prasthutha|

ಬೆಂಗಳೂರು: ಸತತ ಎರಡನೇ ಬಾರಿಗೆ “ಎಸ್ ಡಿ ಪಿ ಐ” ಆಡಳಿತ ನಡೆಸುತ್ತಿರುವ ಸಜೀಪನಡು ಗ್ರಾಮ ಪಂಚಾಯತ್’ಗೆ ” ಗಾಂಧಿ ಗ್ರಾಮ” ಪುರಸ್ಕಾರವನ್ನು ರಾಜ್ಯ ಸರ್ಕಾರ ನೀಡಿ ಗೌರವಿಸಿದೆ.
ಇದು ಗ್ರಾಮ ಪಂಚಾಯತ್’ನ ಜನಸ್ನೇಹಿ ಆಡಳಿತಕ್ಕೆ ಸಂದ ಗೌರವ ಎಂದು ಗ್ರಾಮ ಪಂಚಾಯತ್ ಬಣ್ಣಿಸಿದೆ.
ಸಜೀಪನಡು ಗ್ರಾಮ ಪಂಚಾಯತ್’ಗೆ ಈ ಪ್ರಶಸ್ತಿ ದೊರಕುವಲ್ಲಿ ಮುಖ್ಯ ಪಾತ್ರ ವಹಿಸಿದ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಭಾನು , ಉಪಾಧ್ಯಕ್ಷ ಎಸ್ ಎನ್ ಇಕ್ಬಾಲ್, ಮಾಜಿ ಅಧ್ಯಕ್ಷರಾದ ಮುಹಮ್ಮದ್ ನಾಸೀರ್ ಹಾಗೂ ಸದಸ್ಯರು, ಪಿ ಡಿ ಓ ಮತ್ತು ಸಕಾಲಕ್ಕೆ ಕಡತಗಳನ್ನು ವಿಲೇವಾರಿ ಮಾಡಿ ಪಂಚಾಯತ್’ಗೆ ಪ್ರಶಸ್ತಿ ಸಿಗುವಲ್ಲಿ ತಮ್ಮ ನಿಸ್ವಾರ್ಥ ಸೇವೆಗಳನ್ನು ನೀಡಿದ ಸಿಬ್ಬಂದಿಗಳಾದ ಮುಝಮ್ಮಿಲ್, ಸುಜಾತ, ರೇಣುಕಾ, ಚಂದ್ರಹಾಸ ಅವರಿಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಜೀಪ ನಡು ಗ್ರಾಮ ಸಮಿತಿ ಅಭಿನಂದನೆ ಸಲ್ಲಿಸಿದೆ.

Join Whatsapp