ಶಾಸಕ ಯಶ್ಪಾಲ್ ಸುವರ್ಣನಿಂದ‌‌ ವಿವಾದಾತ್ಮಕ ಹೇಳಿಕೆ | ಪ್ರಜ್ಞಾಸಿಂಗ್ ಸೇರಿದಂತೆ ಉಳಿದವರೆಲ್ಲಾ ಬಾಂಬ್ ಇಡುವ ಮೊದಲು ಕ್ಯಾಮರಾ ಇಟ್ಟು ತರಬೇತಿ ಪಡೆದಿದ್ರಾ?: SDPI ಟಾಂಗ್

Prasthutha|

 ಮಂಗಳೂರು: ಉಡುಪಿ ಶಾಸಕ ಯಶ್ಪಾಲ್ ಸುವರ್ಣನ ವಿವಾದಾತ್ಮಕ ಹೇಳಿಕೆಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ದ.ಕ. ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಟಾಂಗ್ ನೀಡಿದ್ದು, “ಸಂಜೋತ ಎಕ್ಸ್‌ಪ್ರೆಸ್, ಅಜ್ಮೀರ್ ದರ್ಗಾ, ಮಾಲೆಂಗಾವ್ ಸ್ಪೋಟದ ಆರೋಪಿ, BJP ಸಂಸದೆ ಪ್ರಜ್ಞಾಸಿಂಗ್ ಸೇರಿದಂತೆ ಉಳಿದವರೆಲ್ಲಾ ಬಾಂಬ್ ಇಡುವ ಮೊದಲು ಕ್ಯಾಮರಾ ಇಟ್ಟು ತರಬೇತಿ ಪಡೆದಿದ್ರಾ?” ಎಂದು ಪ್ರಶ್ನಿಸಿದ್ದಾರೆ.

- Advertisement -

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ “ಇಂದು ಕ್ಯಾಮರಾ ಇಟ್ಟ ವಿದ್ಯಾರ್ಥಿಗಳು, ನಾಳೆ ಬಾಂಬ್ ಇಡುತ್ತಾರೆ” ಎಂದು ಉಡುಪಿಯ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಶಾಸಕನ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅನ್ವರ್ ಸಾದಾತ್, “ಸಂಜೋತ ಎಕ್ಸ್‌ಪ್ರೆಸ್, ಅಜ್ಮೀರ್ ದರ್ಗಾ, ಮಾಲೆಂಗಾವ್ ಸ್ಪೋಟದ ಆರೋಪಿ, BJP ಸಂಸದೆ ಪ್ರಜ್ಞಾಸಿಂಗ್ ಸೇರಿದಂತೆ ಉಳಿದವರೆಲ್ಲಾ ಬಾಂಬ್ ಇಡುವ ಮೊದಲು ಕ್ಯಾಮರಾ ಇಟ್ಟು ತರಬೇತಿ ಪಡೆದಿದ್ರಾ? ಆದಿ ಉಡುಪಿಯ ಅಮಾಯಕ ಅಪ್ಪ ಮಗನ ನಗ್ನ ಮೆರವಣಿಗೆ ಮಾಡಲು ಯಶ್ಪಾಲ್ ಸುವರ್ಣ ಯಾವ ತರಬೇತಿ ಪಡೆದಿದ್ದರು? ಬೆತ್ತಲೆ ಪ್ರಕರಣದ ಕುಖ್ಯಾತಿ ಶಾಸಕನಾದದ್ದು ಈ ರಾಜ್ಯದ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp