ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗೆ ಮೊಬೈಲ್ ನೀಡಲು ಹೋದ ಸಿಬ್ಬಂದಿ ಬಂಧನ

Prasthutha|

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿಯೇ ಅಕ್ರಮ ಎಸಗುತ್ತಿರುವುದು ಮತ್ತೆ ಸಾಬೀತಾಗಿದೆ. ಒಳ ಉಡುಪಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ಕೈದಿಗೆ ನೀಡಲು ಹೋದ ಸಿಬ್ಬಂದಿಯೊಬ್ಬರು ಜೈಲು ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಚಾಲಕ ಭಾನುಪ್ರಕಾಶ್ ಬಂಧಿತ ಆರೋಪಿಯಾಗಿದ್ದು, ಜುಲೈ 25 ರಂದು ಇವರು ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

- Advertisement -

ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಭಾನುಪ್ರಕಾಶ್, ಜೈಲು ಪ್ರವೇಶ ಮಾಡುವಾಗ ಕೆಎಸ್ಐಎಸ್ಎಫ್ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಆಗ, ಭಾನುಪ್ರಕಾಶ್ ಒಳ ಉಡುಪಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡಿರುವುದು ತಿಳಿದುಬಂದಿದೆ. ಈ ವಿಚಾರವಾಗಿ ಕಾರಾಗೃಹದ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನ ಪರಪ್ಪನ ಅಗ್ರಹಾರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಭಾನುಪ್ರಕಾಶ್ ಅವರನ್ನು ಬಂಧಿಸಲಾಗಿದೆ.

ಮೊಬೈಲ್ ಯಾರಿಗೆ ಕೊಡಲು ಕೊಂಡೊಯ್ಯಲಾಗುತ್ತಿತ್ತು ಎನ್ನುವ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಿಂದ, ಜೈಲಿನಲ್ಲಿ ನಡೆಯುವ ಅಕ್ರಮಗಳಿಗೆ ಕೆಲ ಜೈಲು ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪಗಳಿಗೆ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.

- Advertisement -

ಜೈಲು ಸಿಬ್ಬಂದಿಯು ಹಣದ ಆಸೆಗೆ ಮೊಬೈಲ್, ಮಾದಕ ವಸ್ತುಗಳ ಪೂರೈಕೆ ಮಾಡುತ್ತಿದ್ದಾರೆ. ಜೈಲಿನಲ್ಲಿ ಕೈದಿಗಳ ಬಳಿ ಹಣ ಪಡೆದು ನಿಷೇಧಿತ ವಸ್ತುಗಳ ಪೂರೈಕೆ ಮಾಡುತ್ತಾರೆ ಎನ್ನಲಾಗಿದೆ.

Join Whatsapp