ಶಿವಮೊಗ್ಗ | ಸರಕಾರಿ ಶಾಲೆಯ ಜಾಗ ಖಾಸಗಿ ವ್ಯಕ್ತಿಗೆ ಪರಭಾರೆ: ಕ್ರಮಕ್ಕೆ ಒತ್ತಾಯಿಸಿ SDPI ಪ್ರತಿಭಟನೆ

Prasthutha|

ಶಿವಮೊಗ್ಗ: ಇಲ್ಲಿನ ತುಮರಿ ಸರ್ಕಾರಿ ಶಾಲೆಯ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಿರುವ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ SDPI ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

- Advertisement -


ಸಾಗರ ತಾಲೂಕಿನ ತುಮರಿ ಸರ್ಕಾರಿ ಶಾಲೆಯ 3 ಎಕರೆ ಸೇರಿ ಒಟ್ಟು 8 ಎಕರೆ ಜಾಗವನ್ನು ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಿರುವ ತಹಶೀಲ್ದಾರ್ ರವರನ್ನು ಕೂಡಲೇ ಅಮಾನತು ಮಾಡಬೇಕು. ಸಾಗರದ ಆಜಾ಼ದ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಶಾಲೆ ಕಟ್ಟದ ನಿರ್ಮಾಣದ ಕಾರ್ಯ ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿ SDPI ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಇಮ್ರಾನ್ ಅಹಮದ್, ಪದಾಧಿಕಾರಿಗಳಾದ ಸಲೀಂ ಖಾನ್, ಅಬ್ದುಲ್ ಮುಜೀಬ್, ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.

Join Whatsapp