ಬಸ್ ಮೇಲಿದ್ದ ಪುನೀತ್ ಭಾವಚಿತ್ರಕ್ಕೆ ಮುತ್ತಿಟ್ಟ ಅಜ್ಜಿ: ವೀಡಿಯೋ ವೈರಲ್

Prasthutha|

ಕೊಪ್ಪಳ: ಕೆಎಸ್ ಆರ್ ಟಿಸಿ ಬಸ್ ಬಸ್ ನ ಜಾಹೀರಾತಿನಲ್ಲಿದ್ದ ದಿ.ಪುನೀತ್  ರಾಜ್ ಕುಮಾರ್ ಅವರ ಫೋಟೊ ನೋಡಿ ಭಿಕ್ಷೆ ಬೇಡುವ ಅಜ್ಜಿಯೊಬ್ಬರು ಭಾವುಕರಾಗಿ ತನ್ನ ಸೆರಗಿನಿಂದ ಅಪ್ಪು ಫೋಟೊದಲ್ಲಿದ್ದ ಧೂಳು ಸ್ವಚ್ಚಗೊಳಿಸಿ ಮುತ್ತಿಕ್ಕುವ ಭಾವನಾತ್ಮಕ ವೀಡಿಯೋವೊಂದು ವೈರಲ್ ಆಗಿದೆ.

- Advertisement -

  ಕೊಪ್ಪಳ ಕುಕನೂರು ತಾಲೂಕಿನ ಬಸ್ ನಿಲ್ದಾಣದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.  

ಪುನೀತ್ ರಾಜ್ ಕುಮಾರ್ ಅಗಲಿಕೆಯ ನೋವು ಕುಟುಂಬದವರಿಗೆ ಮಾತ್ರವಲ್ಲ ಅಪಾರ ಅಭಿಮಾನಿಗಳು ಮಕ್ಕಳು, ದೊಡ್ಡವರು ಎನ್ನದೆ ಎಲ್ಲರಿಗೂ ಕಾಡುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

- Advertisement -

ನಿನ್ನೆ ರಾತ್ರಿ 7:30 ರ ಸುಮಾರಿಗೆ ಕುಕನೂರು ಹಾಗೂ ಅರಿಕೇರಾಗೆ ತೆರಳುತ್ತಿದ್ದ ಬಸ್ ಮೇಲೆ ಇದ್ದ ಅಪ್ಪು ಫೋಟೊಗೆ ಅಜ್ಜಿ ಮುತ್ತಿಟ್ಟು, ಅದರ ಮೇಲೆ ಮುಖ ಇಟ್ಟು ಸ್ವಲ್ಪ ಹೊತ್ತು ನಿಂತು ಕಣ್ಣೀರಿಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ಭಾವುಕ ಸನ್ನವೇಶಕ್ಕೆ ಬಸ್ ನಿಲ್ದಾಣದಲ್ಲಿದ್ದ ಜನರು ಮೂಕವಿಸ್ಮಿತರಾದರು.

Join Whatsapp