ಗೃಹ ಇಲಾಖೆಯ ಮೂರು ಪ್ರಮುಖ ವಿಧೇಯಕಗಳಿಗೆ ವಿಧಾನ ಪರಷತ್ತಿನಲ್ಲಿ ಒಪ್ಪಿಗೆ

Prasthutha|

ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ವಿಧಾನ ಪರಿಷತ್ತಿನಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಎರಡು ತಿದ್ದುಪಡಿ ಮಸೂದೆಗಳು ಸೇರಿದಂತೆ ಮೂರು ಪ್ರಮುಖ ವಿಧೇಯಕಗಳಿಗೆ, ಸದನದ ಒಪ್ಪಿಗೆ ಪಡೆದರು.

- Advertisement -

 ನ್ಯಾಯಾಲಯದಲ್ಲಿ ಸಾಕ್ಷಿಯ ಸಾಕ್ಷ್ಯವನ್ನು ಶ್ರವ್ಯ, ದೃಶ್ಯ ವಿದ್ಯುನ್ಮಾನ ವಿಧಾನಗಳ ಮೂಲಕ ದಾಖಲಿಸುವ ಪ್ರಕ್ರಿಯೆಗೆ,  ದಂಡ ಪ್ರಕ್ರಿಯಾ ಸಂಹಿತೆ ( ಕರ್ನಾಟಕ ತಿದ್ದುಪಡಿ) ವಿಧೇಯಕ 2021, ಬಂದಿ ಗಳ ಗುರುತಿಸುವಿಕೆ ( ತಿದ್ದುಪಡಿ ವಿಧೇಯಕ) 2021 ಮತ್ತು ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ 2021, ಗಳಿಗೆ,  ಚರ್ಚೆಗಳ ಮೂಲಕ ಸದನದ ಅನುಮತಿ ಪಡೆದುಕೊಳ್ಳಲಾಯಿತು.

ಇದಕ್ಕೂ ಮುನ್ನ ಈ ಮೂರು ವಿಧೇಯಕ ಗಳು ವಿಧಾನ ಸಭೆಯಲ್ಲಿ, ಚರ್ಚಿತವಾಗಿ ಅನುಮೋದನೆ ಹೊಂದಿದ್ದವು. ಈ ಎಲ್ಲಾ ಮಸೂದೆಗಳನ್ನು ಸದನದ ಸದಸ್ಯರು ಒಮ್ಮತದಿಂದ ಒಪ್ಪಿಗೆ ನೀಡಿದ್ದಕ್ಕೆ, ಸಚಿವರು, ತಮ್ಮ ಧನ್ಯವಾದ ಸಲ್ಲಿಸಿದರು.



Join Whatsapp