ಪಾಕಿಸ್ತಾನ ಪರ ಘೋಷಣೆಯ ಆರೋಪ | ಅಮಾಯಕರನ್ನು ಬಿಡುಗಡೆಗೊಳಿಸದಿದ್ದರೆ ಎಸ್ಪಿ ಆಫೀಸ್ ಮಾರ್ಚ್ : ರಿಯಾಝ್ ಫರಂಗಿಪೇಟೆ

Prasthutha|

ಮಂಗಳೂರು: ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಆರೋಪಿಸಿ ನಾಲ್ವರು ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಅಮಾಯಕರ ಮೇಲಿನ ಪ್ರಕರಣವನ್ನು ಮೂರು ದಿನಗಳೊಳಗಾಗಿ ಹಿಂಪಡೆಯದಿದ್ದಲ್ಲಿ ಎಸ್ಪಿ ಆಫೀಸ್ ಮಾರ್ಚ್ ನಡೆಸಲಾಗುವುದೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಎಚ್ಚರಿಸಿದ್ದಾರೆ.

- Advertisement -

ಪಂಚಾಯತ್ ಚುನಾವಣಾ ಫಲಿತಾಂಶದ ದಿನದಂದು ಬೆಳ್ತಂಗಡಿ ತಾಲೂಕಿನ ಮತ ಎಣಿಕೆ ಕೇಂದ್ರವಾದ ಉಜಿರೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ಸುಳ್ಳಾರೋಪ ಹೊರಿಸಿ ಮೂವರು ಅಮಾಯಕ ಯುವಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ, ರಾತ್ರೋ ರಾತ್ರಿ ಮನೆಗೆ ನುಗ್ಗಿ ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ. ಇಂತಹ ಘಟನೆಯ ವೇಳೆ ಸೂಕ್ಷ್ಮವಾಗಿ ವೀಡಿಯೋವನ್ನು ಪರಿಗಣಿಸಿ ಪ್ರಕರಣವನ್ನು ದಾಖಲಿಸಿ ಕೊಳ್ಳಬೇಕಾಗಿದ್ದ ಪೊಲೀಸರು, ರಾಜಕೀಯ ಒತ್ತಡಕ್ಕೆ ಮಣಿದು ನಡೆಯದ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ ಅಮಾಯಕ ಯುವಕರನ್ನು ಬಂಧಿಸಿ ಪೊಲೀಸ್ ವೃತ್ತಿಗೆ ಕಳಂಕ ತಂದಿದ್ದಾರೆ ಎಂದು ಹೇಳಿದರು.

ದ.ಕ.ಜಿಲ್ಲೆಯ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಪ್ರಕರಣ ದಾಖಲಿಸಲು ಇಡೀ ಜಿಲ್ಲೆಯೇ ಒತ್ತಾಯಪಡಿಸಿದಾಗ ಪೊಲೀಸ್ ಇಲಾಖೆ ಮೌನ ವಹಿಸಿತ್ತು. ಇದೀಗ ಸಂಘಪರಿವಾರ ಸುಳ್ಳಾರೋಪ ನಡೆಸಿ ಜಿಲ್ಲೆಯ ಸಾಮರಸ್ಯವನ್ನು ಕೆಡಿಸಲು ಷಡ್ಯಂತ್ರ ನಡೆಸುವಾಗ ಅಮಾಯಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲು ಉತ್ಸುಕತೆ ತೋರಿಸುತ್ತಿರುವುದು ಪೊಲೀಸರ ದ್ವಿಮುಖ ಧೋರಣೆಯಾಗಿದೆ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಹೇಳಿದರು.

- Advertisement -

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಸ್‌ಡಿಪಿಐನ ಅಭೂತಪೂರ್ವ ಸಾಧನೆಯನ್ನು ತೋರಿದೆ. ಈ ಕಾರಣಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರ ಈ ರೀತಿಯ ಹುನ್ನಾರವನ್ನು ನಡೆಸುತ್ತಿದೆ. ಘಟನೆಯ ಕುರಿತು ಮಾಧ್ಯಮಗಳನ್ನು ಬಳಸಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸಗಳು ನಡೆಯುತ್ತಿದೆ. ಪೊಲೀಸ್ ಇಲಾಖೆ ದ್ವಿಮುಖ ಧೋರಣೆಯನ್ನು ಕೈ ಬಿಟ್ಟು ಘಟನೆಯ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು, ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾ ಸತ್ಯತೆ ಜನರ ಮುಂದಿಡಬೇಕು. ಅಮಾಯಕ ಯುವಕರ ಮೇಲಿನ ಪ್ರಕರಣವನ್ನು ಕೈ ಬಿಡಬೇಕು ಮತ್ತು ಬಂಧಿತ ಅಮಾಯಕ ಯುವಕರನ್ನು ಬಿಡುಗಡೆಗೊಳಿಸಬೇಕು ಅಶ್ರಫ್ ಮಾಚಾರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್.ಎಚ್, ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹೈದರ್ ನಿರ್ಸಾಲ್ ಉಪಸ್ಥಿತರಿದ್ದರು.



Join Whatsapp