ಸೌದಿಯೇತರ ಉದ್ಯೋಗಿಗಳ ಹೆತ್ತವರು, ಒಡಹುಟ್ಟಿದವರಿಗೆ ಉದ್ಯೋಗದಾತರು ಆರೋಗ್ಯ ವಿಮೆ ಒದಗಿಸುವ ಅಗತ್ಯವಿಲ್ಲ

Prasthutha|

ರಿಯಾದ್: ತಮ್ಮ ಸೌದಿಯೇತರ ಉದ್ಯೋಗ ಸಿಬ್ಬಂದಿಗಳ ಹೆತ್ತವರು ಮತ್ತು ಒಡಹುಟ್ಟಿದವರಿಗೆ ಕಡ್ಡಾಯ ಆರೋಗ್ಯ ವಿಮೆಯನ್ನು ಒದಗಿಸುವ ಅಗತ್ಯ ಉದ್ಯೋಗದಾತರಿಗೆ ಇರುವುದಿಲ್ಲ ಎಂದು ಸಹಕಾರಿ ಆರೋಗ್ಯ ವಿಮೆ ಕೌನ್ಸಿಲ್ (ಸಿ.ಸಿ.ಎಚ್.ಐ) ಹೇಳಿದೆ.

- Advertisement -

“ಸೌದಿ ಅರೇಬಿಯಾದಲ್ಲಿ ತಮ್ಮ ಪ್ರಾಯೋಜಕತ್ವದಡಿಯಿರುವ ಹೆತ್ತವರು, ಸಹೋದರರು ಮತ್ತು ಸಹೋದರಿಯರ ವಿಮೆಯನ್ನು  ಸೌದಿಯೇತರ ಉದ್ಯೋಗಿಗಳು ಸ್ವತ: ಏರ್ಪಾಡುಗೊಳಿಸಬೇಕಾಗಿದೆ” ಎಂದು ಸಿ.ಸಿ.ಎಚ್.ಐನ ವಕ್ತಾರ ಉಸ್ಮಾನ್ ಅಲ್ ಕಸಾಬಿ ಹೇಳಿದರು.

ಸೌದಿ ಮತ್ತು ಸೌದಿಯೇತರ ಸಿಬ್ಬಂದಿಗಳು ಮತ್ತು ವ್ಯವಸ್ಥೆಯಡಿ ಬರುವ  ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸುವುದು ಸಹಕಾರಿ ಆರೋಗ್ಯ ವಿಮೆ ಕಾನೂನಿನಡಿ ಎಲ್ಲಾ ಖಾಸಗಿ ವಲಯದ ಉದ್ಯೋಗದಾತರಿಗೆ ಕಡ್ಡಾಯ. ಪತ್ನಿ, 25 ವಯಸ್ಸಿನವರೆಗಿನ ಪುತ್ರರು ಮತ್ತು ಅವಿವಾಹಿತ ಹಾಗೂ ಉದ್ಯೋಗ ರಹಿತ ಪುತ್ರಿಯರು ಆ ವ್ಯಾಪ್ತಿಗೆ ಒಳಪಡುತ್ತಾರೆ” ಎಂದು ಅಲ್ ಕಸಾಬಿ ಅಲ್ ಎಖ್ಬಾರಿಯಾ ಚಾನೆಲ್ ಜೊತೆ ಮಾತನಾಡುತ್ತಾ ಹೇಳಿದರು.

Join Whatsapp