SDPI ಕಚೇರಿ ಸೀಲ್ ಮಾಡಿಲ್ಲ, ಮಾಡಿದ್ದರೆ ನನಗೆ ತಿಳಿಸಿ: ಎಡಿಜಿಪಿ ಅಲೋಕ್ ಕುಮಾರ್

Prasthutha|

ಬೆಂಗಳೂರು: ಪೊಲೀಸರು ಎಸ್ ಡಿಪಿಐ ಕಚೇರಿಗಳನ್ನು ಸೀಲ್ ಮಾಡಿಲ್ಲ.  ಒಂದು ವೇಳೆ  ಎಸ್ ಡಿಪಿಐ ಕಚೇರಿಗಳನ್ನು ಸೀಲ್ ಮಾಡಿದ್ದರೆ ಅಂತಹ ಸ್ಥಳಗಳ ಬಗ್ಗೆ ನನಗೆ ಮಾಹಿತಿ ನೀಡಿ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

- Advertisement -

ಪಿಎಫ್ ಐ ಕಚೇರಿಗಳ ಜೊತೆಗೆ ಎಸ್ ಡಿಪಿ ಕಚೇರಿಗಳಿಗೂ ಬೀಗಮುದ್ರೆ ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಪಿಎಫ್ ಐ ಕಚೇರಿಗಳಿಗೆ ಪೊಲೀಸರು ದಾಳಿ ನಡೆಸಿ,  ಹಲವು ಕಚೇರಿಗಳನ್ನು ಸೀಲ್ ಮಾಡಿದ್ದಾರೆ.  ಪೊಲೀಸರು ಎಸ್ ಡಿಪಿಐ ಕಚೇರಿಗಳನ್ನು ಸೀಲ್ ಮಾಡಿಲ್ಲ. ನಿಷೇಧಿತ ಪಿಎಫ್ ಐ ಸಂಘಟನೆಯು ಎಸ್ ಡಿಪಿಐ ಕಚೇರಿಗಳನ್ನು ಬಳಸುತ್ತಿದ್ದ ಸ್ಥಳಗಳನ್ನು ಮಾತ್ರ ಶೋಧಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ತನ್ನ ಕಚೇರಿಗಳಿಗೆ ಬೀಗ ಹಾಕಿರುವ ಬಗ್ಗೆ ಎಸ್ ಡಿಪಿಐ ಕರ್ನಾಟಕ ಟ್ವೀಟ್ ಮಾಡಿ ಈ ಬಗ್ಗೆ ಎಡಿಜಿಪಿ, ಐಜಿಪಿ ಅವರ ಗಮನ ಸೆಳೆದಿತ್ತು.

- Advertisement -




Join Whatsapp