ಅತೀ ವೇಗದ ಚಾಲನೆ; ರಸ್ತೆ ಬಿಟ್ಟು ಹಳ್ಳಕ್ಕೆ ಜಾರಿದ ಬಸ್

Prasthutha|

ಕಡಬ: ಓವರ್ಟೇಕ್ ಮಾಡುವ ಸಂದರ್ಭ ಕೆ.ಎಸ್.ಆರ್.ಟಿ ಸಿ ಬಸ್ಸೊಂದು ರಸ್ತೆ ಬಿಟ್ಟು ಹಳ್ಳಕ್ಕೆ ಜಾರಿದ ಘಟನೆ ತಾಲೂಕಿನ ಪದವು ಎಂಬಲ್ಲಿ ನಡೆದಿದೆ.

- Advertisement -

ಉಪ್ಪಿನಂಗಡಿಯಿಂದ ಕಡಬಕ್ಕೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಅಪಘಾತ ನಡೆದ ಕೆಲವೇ ದೂರದಲ್ಲಿ ವಿದ್ಯುತ್ ಕಂಬ ಹಾಗೂ ಒಂದು ಮರ ಇದ್ದು ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಘಟನೆಗೆ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

Join Whatsapp